167525-modi-karnataka

ಬೆಂಗಳೂರು: ಉಡುಪಿಗೆ ಬಂದ್ರೆ ಯಾರೂ ತಾನೇ ಸುಮ್ಮನೆ ಹೋಗುತ್ತಾರೆ ಹೇಳಿ, ಆದರೆ ಪ್ರಧಾನಿಗಳು ಮಾತ್ರ ಇಲ್ಲಿಯವರೆಗೂ ಬಂದ್ರೂ ಸಹಿತ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡದೆ ಹೋಗಿರುವುದು  ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಹೌದು, ಪ್ರಧಾನಿ  ನರೇಂದ್ರ ಮೋದಿಯವರು  ಉಡುಪಿಗೆ  ಚುನಾವಣಾ ಪ್ರಚಾರಕ್ಕೆ ಎಂದು ಬಂದಿದ್ದರು ಆದರೆ ಅವರು ಮಠಕ್ಕೆ ಭೇಟಿ ನೀಡದೆ ನೇರವಾಗಿ ಚಿಕ್ಕೋಡಿಗೆ ತೆರಳಿದ್ದರು. ಈ ನಡೆ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಆದರೆ ಈಗ ಅವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಲು ಇನ್ನೊಂದು ದಿನಾಂಕವನ್ನು ನಿಗದಿ ಮಾಡುವಂತೆ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿಯವರು ಉಡುಪಿಯ ಎಂಜಿಎಂ ಮೈದಾನದಲ್ಲಿ ಬಿಜೆಪಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಇದು ಶ್ರೀಕೃಷ್ಣನಗರಿ, ಕನಕದಾಸರಿಗೆ ಶ್ರೀಕೃಷ್ಣ ಒಲಿದ ಪುಣ್ಯಭೂಮಿ ಎಂದು ಹೇಳಿದ್ದರು.

ಅಲ್ಲದೆ ಇದೇ ವೇಳೆ  ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಮಯದ ಅಭಾವದಿಂದ ನೇರವಾಗಿ ಚಿಕ್ಕೋಡಿಗೆ ತೆರಳಿದ್ದರು.ಪ್ರಧಾನಿ ಮೋದಿ ಬರುತ್ತಾರೆ ಎಂದು ಬೆಳಗ್ಗೆ 12.30ರಿಂದ ಸಂಜೆ 4.30ರವರೆಗೆ ಸಾರ್ವಜನಿಕರಿಗೆ ಶ್ರೀಕೃಷ್ಣ ದರ್ಶನಕ್ಕೆ ಅವಕಾಶವನ್ನು ಸ್ಥಗೀತಗೊಳಿಸಲಾಗಿತ್ತು.

By suddi9

Leave a Reply

Your email address will not be published. Required fields are marked *