ಹೊನ್ನಾವರ: ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಇಂದು ಹೊನ್ನಾವರದಲ್ಲಿ ಭಾರೀ ಮುಖಭಂಗವಾಗಿದೆ.
ಇಂದು ಮಧ್ಯಾಹ್ನ ಅಂಕೋಲಾದಿಂದ ಹೊನ್ನಾವರಕ್ಕೆ ಆಗಮಿಸಿದ ರಾಹುಲ್ ಗಾಂಧಿ ಇಲ್ಲಿನ ಶರಾವತಿ ವೃತ್ತದಲ್ಲಿ ರೋಡ್ ಶೋ ನಡೆಸುತ್ತಿದ್ದರು. ಆದರೆ, ಈ ಸಂದರ್ಭದಲ್ಲಿ ಅಲ್ಲಿನ ಜನ ಪ್ರಧಾನಿ ಮೋದಿ ಪರ ಜೈಕಾರ ಹಾಕಿದದ್ದರಿಂದ ರಾಹುಲ್ ಗಾಂಧಿಗೆ ತೀವ್ರ ಮುಖಭಂಗವಾಗಿದೆ. ಮೋದಿಪರ ಸಾರ್ವಜನಿಕರು ಜೈಕಾರ ಕೂಗಲು ಆರಂಭಿಸಿದ್ದೇ ತಡ, ರಾಹುಲ್ ಗಾಂಧಿ ಅಲ್ಲಿಂದ ಮುಂದೆ ಸಾಗಿದ್ದಾರೆ.
ನಾಳೆಯೂ ರಾಹುಲ್ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದು, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

