IMG20180425010550 (1)

ಬಂಟ್ವಾಳ: ಗುಡ್ಡಚಾಮುಂಡೇಶ್ವರಿ ಪಂಜುರ್ಲಿ, ಮಲೆಕೊರತಿ ದೈವಗಳಿಗೆ ಮಿತ್ತಪೆರಾಜೆ ಚಾವಡಿಯಲ್ಲಿ ಒಲಸರಿ ಜಾತ್ರೆ ನಡೆಯಿತು.

ಜಾತ್ರೆಯ ಪ್ರಯಕ್ತ  ಚಾಮುಂಡೇಶ್ವರಿ ಸೇವಾ ಟ್ರಸ್ಟ್, ಮತ್ತು ಯುವ ವೇದಿಕೆ ವತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು  ದಿಲ್ಲಿಯ ಸಿವಿಲ್ ಇಂಜಿನಿಯರ್ ಎ.ಗೋಪಾಲಕೃಷ್ಣ ಭಟ್ ದೀಪ‌ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಮಾಜಿ ಸೈನಿಕ ಸದಾಶಿವ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಬರಂಗರೆ ಕಾಂತಾಡಿಗುತ್ತು ಜಯರಾಮ ರೈ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ  ಮಾಜಿ ಸೈನಿಕ್ ಸದಾಶಿವ ಕೋಟ್ಯಾನ್ , ಪೆರಾಜೆ ಗುತ್ತು ಶ್ರೀ ಕಾಂತ ಆಳ್ವ, ಯುವ ವೇದಿಕೆಯ ಖಜಾಂಚಿ ಬಾಲಕೃಷ್ಣ ಮಿತ್ತಪೆರಾಜೆ, ವರಮಹಾಲಕ್ಮೀ ಸೇವಾ ಸಮಿತಿ ಅಧ್ಯಕ್ಷೆ ಭಾರತಿ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.

ಸೇವಾ ಟ್ರಸ್ಟ್ ನ ಅಧ್ಯಕ್ಷ ಮಾದವ ಕುಲಾಲ್ ಪಾಳ್ಯ ಸ್ವಾಗತಿಸಿ, ಟ್ರಸ್ಟ್ ನ ಸದಸ್ಯ ಉಮೇಶ್ ಪಾಳ್ಯ ವಂದಿಸಿದರು.ಹರಿಣಿ ಮತ್ತು ಯತಿರಾಜ್ ಮಿತ್ತಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ‌

IMG20180425010413

By suddi9

Leave a Reply

Your email address will not be published. Required fields are marked *