ಸುದ್ದಿ9ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತಿರುವ ಟೀಮ್ ಇಂಡಿಯಾ, ಒನ್​’ಡೇ ಸೀರಿಸ್​ಮೇಲೆ ಕಣ್ಣಿಟ್ಟಿದೆ. ಇಲ್ಲಿ ಗೆದ್ದು ಆಂಗ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ. ಅದಕ್ಕೆ ಸರಿಯಾಗಿ ಭಾರತ-ಇಂಗ್ಲೆಂಡ್ ಏಕದಿನ ಪಂದ್ಯಗಳ ಇತಿಹಾಸ ಧೋನಿ ಬಾಯ್ಸ್ ಪರವಾಗಿದೆ. ಭಾರತ-ಇಂಗ್ಲೆಂಡ್​ಟೆಸ್ಟ್ ಸೀರಿಸ್ ಇತಿಹಾಸ ಪುಟ ಸೇರಿಯಾಗಿದೆ. ಆದರೂ ಸೋಲಿನ ಸೇಡಿನಿಂದ ಭಾರತೀಯರು ಮಾತ್ರ ಹೊರಬಂದಿಲ್ಲ. ಏನಾದರೂ ಮಾಡಿ ಒನ್’​ಡೇ ಸೀರಿಸ್​ಗೆಲ್ಲಲೇಬೇಕು ಅನ್ನುವ ಹಠಕ್ಕೆ ಬಿದ್ದಿದ್ದಾರೆ. ಇದಕ್ಕೆ ತಕ್ಕನಾಗಿ ಬಿಸಿಸಿಐ ಸಹ ಸಹಾಯಕ ಸಿಬ್ಬಂದಿ ಚೇಂಜ್ ಮಾಡಿದೆ. ಅವರೆಲ್ಲಾ ಆಟಗಾರರಿಗೆ ಹುರುಪು ತುಂಬಿದ್ದಾರೆ. ಈಗ ಧೋನಿ ಬಾಯ್ಸ್ ಮುಂದಿರುವ ಗುರಿ ಒಂದೇ. ಅದು ಒನ್’​ಡೇ ಸೀರಿಸ್ ಗೆಲ್ಲೋದು. ಇಂಗ್ಲೆಂಡ್ ವಿರುದ್ಧದ ಒನ್’​ಡೇ ಇತಿಹಾಸ ಭಾರತದ ಪರವಾಗಿದೆ. ಆಂಗ್ಲರು ಕ್ರಿಕೆಟ್​ಜನಕರಾದರೂ ಅವರ ವಿರುದ್ಧ ಭಾರತೀಯರು ಪಾರುಪತ್ಯ ಸಾಧಿಸಿದ್ದಾರೆ. ಭಾರತ-ಇಂಗ್ಲೆಂಡ್ ಒಟ್ಟು 87 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಟೀಮ್ ಇಂಡಿಯಾ 47ರಲ್ಲಿ ಜಯ ಸಾಧಿಸಿದರೆ, 35ರಲ್ಲಿ ಸೋತಿದೆ. 2 ಮ್ಯಾಚ್’​ಗಳು ರೋಚಕ ಟೈನಲ್ಲಿ ಕೊನೆಗೊಂಡಿವೆ. 3 ಮಳೆಯಿಂದ ರದ್ದಾಗಿವೆ. ಈ ಅಂಕಿಅಂಶ ನೋಡಿದ ಮೇಲೆ ಭಾರತ ಏಕದಿನ ಸರಣಿ ಫೇವರಿಟ್ ತಂಡ. ಜೊತೆಗೆ ಸೀಮಿತ ಓವರ್​’ಗಳ ಮಾದರಿಯಲ್ಲಿ ಭಾರತೀಯರು ಒಳ್ಳೆ ಫಾರ್ಮ್​ನಲ್ಲಿದ್ದಾರೆ. ಇನ್ನು ಇಂಗ್ಲೆಂಡ್’​ನಲ್ಲೇ ನಡೆದ ಚಾಂಪಿಯನ್ಸ್ ಟ್ರೋಫಿಯನ್ನ ಭಾರತ ಗೆದ್ದಿತ್ತು. ಆ ಟೂರ್ನಿಯಲ್ಲಿ ಆಡಿದ್ದ ಬಹುತೇಕ ಆಟಗಾರರು ಸದ್ಯ ಟೀಮ್’​ನಲ್ಲಿದ್ದಾರೆ. ಅದರಲ್ಲೂ ಓಪನರ್ ಶಿಖರ್ ಧವನ್​-ರೋಹಿತ್ ಶರ್ಮಾ ಕ್ಲಿಕ್ ಆಗಿದ್ದು ಇಲ್ಲಿಯೇ. ಇಂಗ್ಲೆಂಡ್ ವಿರುದ್ಧ ಕಳೆದ ಪ್ರವಾಸದಲ್ಲಿ ಏಕದಿನ ಸರಣಿ ಸೋತಿರಬಹುದು. ಆದರೆ ಅದಾದ ನಂತರ ನಡೆದ ಎರಡು ಒನ್’​ಡೇ ಸೀರಿಸ್​ಅನ್ನು ಭಾರತವೇ ಗೆದ್ದುಕೊಂಡಿದೆ. ಜೊತೆಗೆ ಚಾಂಪಿಯನ್ಸ್ ಟ್ರೋಫಿ. ಈ ಎಲ್ಲವೂ ಭಾರತೀಯ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ.

team-india
images

 

By Suddi9

Leave a Reply

Your email address will not be published. Required fields are marked *