ಬಂಟ್ವಾಳ: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಶುಕ್ರವಾರ ತಾಲೂಕಿನ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಚುನಾವಣೆ ತಯಾರಿ ಬಗ್ಗೆ ಸೂಕ್ತ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಚುನಾವಣಾಧಿಕಾರಿ ರವಿ ಬಸ್ರಳ್ಳಿ, ತಹಶೀಲ್ದಾರ್ ವೈ. ರವಿ, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಚುನಾವಣಾ ಉಪ ತಹಶೀಲ್ದಾರ್ ಎ.ಪ್ರಕಾಶ್, ಗ್ರೆಟ್ಟಾ ಮಸ್ಕರೇನಸ್, ಸೀತಾರಾಮ ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು ಸೇರಿ ಮತ್ತಿತರರು ಉಪಸ್ಥಿತರಿದ್ದರು.


