bus-1-e1523600453346

ಹಾಸನ: ನಿಯಂತ್ರಣ ತಪ್ಪಿದ  ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಶಾಲಾ ಅಡ್ಮಿಷನ್ ಗಾಗಿ ವಿದ್ಯಾರ್ಥಿ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ  ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಬ್ಯಾಡರಹಳ್ಳಿ ಗೇಟ್ ಬಳಿ ನಡೆದಿದೆ.

ಮೃತರನ್ನು ಶಶಿಧರ್ (14) ಮತ್ತು ದಯಾನಂದ್(38) ಎಂದು ಗುರುತಿಸಲಾಗಿದೆ.

21 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಖಾಸಗಿ  ಬಸ್ ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ಬ್ಯಾಡರಹಳ್ಳಿ ಗೇಟ್ ಬಳಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಚಾಲಕನ ನಿದ್ದೆ ಮಂಪರು ಹಾಗೂ ಬಸ್ ನ ತಾಂತ್ರಿಕ ದೋಷದಿಂದ ಬಸ್ ಪಲ್ಟಿಯಾಗಿದೆ ಎಂದು ಶಂಕಿಸಲಾಗಿದೆ.

By Suddi9

Leave a Reply

Your email address will not be published. Required fields are marked *