ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಐತಿಹಾಸಿಕ ಜಾತ್ರಾ ಮಹೋತ್ಸವದ ಕೊನೆಯ ಚೆಂಡು ಬುಧವಾರ ಸಮಾಪ್ತಿಗೊಂಡಿತು.
ಏ.7 ರಂದು ಆರಂಭಗೊಂಡ ಚೆಂಡು ಐದು ದಿನದ ಉತ್ಸವದೊಂದಿಗೆ ಸರಳ ವಿಧಿ ವಿಧಾನಗಳ ಮೂಲಕ ನಡೆದಿದ್ದು, ಇನ್ನು ಪೊಳಲಿ ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆ ಮುಂದುವರಿಯುತ್ತಿದ್ದರಿಂದ ಕೆಲವೊಂದು ಸೇವೆಗಳನ್ನು ಕಾರಣಾಂತರಗಳಿಂದ ಕೈ ಬಿಡಲಾಗಿದೆ.
ಇನ್ನೂ ಜಾತ್ರಾ ಮಹೋತ್ಸವದಲ್ಲಿ ಕ್ಷೇತ್ರದ ಉತ್ಸವದ ಮೂರ್ತಿಯನ್ನು ಕೇಪಳ ಹೂವಿನ ದಂಡೆಯಿಂದ ಅಲಂಕರಿಸಿ ಬಲಿ ನಡೆಸುವುದು, ಉಡಿಕೆ ಸುತ್ತಿನ ವೇಳೆ ಹರಕೆಯ ಪುಷ್ಪಪೂಜೆ ನೆರವೇರಿಸುವುದು ಹಾಗೂ ಪ್ರತಿ ಐದು ಹತ್ತು ಹದಿನೈದು, ಇಪ್ಪತ್ತು ಮತ್ತು ಇಪ್ಪತೈದನೇ ದಿವಸದಲ್ಲಿ ಹೂವಿನ ಹಳೆಯ ದಂಡಮಾಲೆ ಕಳಚಿ ಹೊಸ ದಂಡಮಾಲೆಯನ್ನು ಕಟ್ಟಿ ದಂಡಮಾಲೆ ಉತ್ಸವಗಳನ್ನು ನಡೆಸುವುದು ಇಲ್ಲಿನ ಸಾಂಪ್ರದಾಯದ ವಾಡಿಕೆ.
ಇಂದು(ಎ.12) ಶ್ರೀ ಕ್ಷೇತ್ರ ಪೊಳಲಿಯಲ್ಲಿ ಮಹಾರಥೋತ್ಸವ ಹಾಗೂ ಎ.13 ರಂದು ಅವಭ್ರತ ಸ್ನಾನ ನಡೆಯಲಿದೆ.



