ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ಚೆಂಡು ಇಂದು ಏ.11ರಂದು ನಡೆಯಲಿದೆ. ಶನಿವಾರ ಆರಂಭಗೊಂಡ ಚೆಂಡು ಐದು ದಿನವು ಚೆಂಡಿನ ಉತ್ಸವ ಸರಳ ವಿಧಿ ವಿಧಾನಗಳ ಮೂಲಕ ನಡೆಯಿತು.10vp chendu

ದೇವಳದಲ್ಲಿ ತಂತ್ರಿಗಳು ,ಅರ್ಚಕರು, ಆಡಳಿತ ಮಂಡಳಿಯ ಮೋಕ್ತೇಸರರು ಪರ್ದಕಂಡ ವಾಸುದೇವ ಭಟ್ ಹಾಗೂ ದೇವಳದ ಪ್ರಮುಖರಾದವರು ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮುಂಜೆ ,ಮಳಲಿ ,ಉಳಿಪಾಡಿ, ಮೊಗರು ಗುತ್ತಿನ ಪ್ರಮುಖರೊಂದಿಗೆ ಬ್ರಹದಾಕಾರದ ಚೆಂಡನ್ನು ಕೊಂಬು ಕಹಳೆ ಬ್ಯಾಂಡ್ ವಾಲಗದೊಂದಿಗೆ ಪವಿತ್ರವಾದ ಚೆಂಡಿನ ಗದ್ದೆಗೆ ದೇವಳದಿಂದ ತರಲಾಯಿತು. ಪ್ರಮುಖರಾದ ಪರ್ದಕಂಡ ವಾಸುದೇವ ಭಟ್ ಅವರು ಚೆಂಡಾಟಕ್ಕೆ ಚಾಲನೆ ನೀಡಿದರು. ಅಮ್ಮುಂಜೆ ಕಡೆಯಿಂದ ಮಳಲಿ ಕಡೆಗೆ ಮಳಲಿಯಿಂದ ಅಮ್ಮುಂಜೆ ಕಡೆಗೆ ಚೆಂಡನ್ನು ಕುಟ್ಟುತ್ತಾರೆ ಇವರಿಗೆ ಬೆಳ್ಳೂರು ಮಲ್ಲೂರಿನವರು ಸಾಥ್ ನೀಡುತ್ತಾರೆ.

DSC_4684

10-7

10vp chendu1

10-01

ಚೆಂಡು ಗದ್ದೆಯ ಒಂದು ಬದಿಗೆ ಮುಟ್ಟಿಸಿ ಚೆಂಡು ಹಾರಿಸಿದವರಿಗೆ ಎತ್ತಿಕೊಂಡು ಬಂದು ಕೊಟ್ಟರೆ ಗೆಲುವು ಅವರದ್ದಾಗುತ್ತದೆ. ಹೀಗೆ ದಿನಕ್ಕೆ ಮೂರು ಬಾರಿ ಚೆಂಡಾಟ ನಡೆಯುವುದು. ನಂತರ ಚೆಂಡನ್ನು ದೇವಳಕ್ಕೆ ತಂದು ದೇವಳದ ಮುಂಭಾಗದಲ್ಲಿ ಅಧಿಕಾರಿ ವರ್ಗದವರಿಗೆ ಕೊಂಬು ವಾಲಗದವರಿಗೆ ಜೀಟಿಗೆಯವರಿಗೆ ಗುತ್ತಿನವರಿಗೆ ದೇವಳದ ಅರ್ಚಕರು ಗಂಧ ಪ್ರಸಾದ ನೀಡುವರು. ನಂತರ ದೇವಳದಲ್ಲಿ ಶ್ರೀ ದೇವಿಗೆ ಪೂಜೆ ನಡೆದು ದೇವಸ್ಥಾನಕ್ಕೆ ಬ್ರಹದಾಕಾರದ ಬ್ಯಾಂಡ್ ಭಾರಿಸುತ್ತಾ ಚೆಂಡಿ ನೊಂದಿಗೆ ಒಂದು ಸುತ್ತು ಮೆರವಣಿಗೆಯಲ್ಲಿ ಬಂದಲ್ಲಿ ಅಂದಿನ ಉತ್ಸವ ಮುಕ್ತಾಯವಾಗುವುದು.10vpband

11-2

ಇದಕ್ಕೆ ಜೀಟಿಗೆ ಸಲಾಂ ಎಂದು ಕರೆಯುತ್ತಾರೆ. ಈಗೇ  ಪೊಳಲಿಯಲ್ಲಿ ಐದು ದಿನಗಳ ಚೆಂಡಿನ ಉತ್ಸವ ನಡೆಯುತ್ತದೆ. ವರ್ಷಂಪ್ರತಿ ನಡೆಯುವ ಪೊಳಲಿ ಚೆಂಡಿಗೆ ಮಳೆಬರುವುದು (ಚೆಂಡ್ಗ್ ಬರ್ಸ ಬರ್ಪುಂಡು) ಇಲ್ಲಿಯ ಪ್ರತೀತಿ ಜನರ ನಂಬಿಕಯಂತೆ ಚೆಂಡಾಟದ ಸಂದರ್ಭದಲ್ಲಿ ಮಳೆ ಬಂದು ಚೆಂಡಾಟದಲ್ಲಿ ಭಾಗವಹಿಸಿದ ಯುವಕರಿಗೆ ಮಳೆರಾಯ ತಂಪೆರಗುತ್ತಾನೆ ಎಂಬ ಭಕ್ತರ ನಂಬಿಕೆ ಅಚಲವಾಗಿದೆ.

By suddi9

Leave a Reply

Your email address will not be published. Required fields are marked *