images
ಪುತ್ತೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ನೆಹರೂನಗರದ ಕಾಲೇಜು ಬಳಿ ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಮಂಗಳವಾರ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಕಬಕದ ಕಲ್ಲಂದಡ್ಕ ನಿವಾಸಿಗಳಾದ ಮೊಹಮ್ಮದ್‌ ತೌಫೀಕ್‌ ಹಾಗೂ ಉಮ್ಮರ್‌ ಫಾರೂಕ್‌ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 350ಗ್ರಾಂ. ಗಾಂಜಾ ಹಾಗೂ ಬೈಕನ್ನು ವಶಪಡಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಅಜಯ್‌ ಕುಮಾರ್‌ ನೇತೃತ್ವದ ಪೊಲೀಸರ ತಂಡ ಭಾಗವಹಿಸಿತ್ತು.

ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

By suddi9

Leave a Reply

Your email address will not be published. Required fields are marked *