BJP-1483006810_835x547

ಮಂಗಳೂರು: ಮಂಗಳೂರಿನ ಶಕ್ತಿನಗರದ ನಾಲ್ಯಪದವು ವಾರ್ಡಿನಲ್ಲಿ ಒಂದೇ ಡೋರ್ ನಂಬರಿನಲ್ಲಿ 260ಕ್ಕೂ ಹೆಚ್ಚು ನಕಲಿ ಮತಗಳಿರುವುದು ಪತ್ತೆ ಮಾಡಿ ಅದನ್ನು ರದ್ದುಪಡಿಸಲು ಸೂಚಿಸಲಾಗಿದ್ದರೂ ಮತ್ತೆ ಅದೇ ಡೋರ್ ನಂಬರ್ ನಲ್ಲಿ 69 ಮತಗಳು ಕಾಣಿಸಿಕೊಂಡಿರುವುದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ಡಿಲೀಶನ್ ಆದಬಳಿಕ ಮತಪಟ್ಟಿ ಬಿಡುಗಡೆಯಾದಾಗ, 69 ಮತದಾರರು ಒಂದೇ ಡೋರ್ ನಂಬರಿನಲ್ಲಿ ವಾಸವಿರುವುದು ಪತ್ತೆಯಾಗಿದೆ. ಮಂಗಳೂರಿನ ಮೆಡಿಕಲ್ ಕಾಲೇಜುಗಳಲ್ಲಿ ಕಲಿಯುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗಳು ಈಮೂಲಕ ನಕಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಶಕ್ತಿನಗರದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ಇರುವ 119- 20 ಡೋರ್ ನಂಬರಿನಲ್ಲಿ 69 ಮತದಾರರಿದ್ದು ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಸ್ಥಳೀಯ ಚುನಾವಣಾಧಿಕಾರಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ಆರೋಪ ವ್ಯಕ್ತವಾಗಿದ್ದು ಬಿಜೆಪಿ ಮುಖಂಡರು ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಿದ್ದಾರೆ.

By Suddi9

Leave a Reply

Your email address will not be published. Required fields are marked *