ಮಂಗಳೂರು: ಬ್ರಿಟಿಷರ ಕಾಲದಲ್ಲಿ ದೇಶದ ಜನರನ್ನು ಒಗ್ಗೂಡಿಸಲು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವಂತೆ ತಿಲಕರು ಕರೆ ನೀಡಿದರು . ಅಂತಹ ಗಣೇಶೋತ್ಸವ ಇಂದೂ ಮುಂದೂ ವಿಜೃಂಭಣೆಯಿಂದ ನಡೆಯಬೇಕು. ಅದಕ್ಕಾಗಿ ಎಲ್ಲರ ಸಹಕಾರವೂ ಅತ್ಯಗತ್ಯ ಎಂದು ಬಿಜೆಪಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದರು
ಮಂಗಳೂರಿನ ಕಣ್ಣೂರು ಗಣೇಶೋತ್ಸವ ಸಮಿತಿಯ ನೂತನ ಸಭಾ ಕಟ್ಟಡದ ಶಿಲನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು
ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ, ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಮೋಹನ್ ಪಡೀಲ್, ಲಕ್ಷ್ಮಿ ಮೂಲ್ಯ, ರಘುರಾಮ್ ಶೆಟ್ಟಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಧೀರಜ್ ಶೆಟ್ಟಿ, ಮಹಾಬಲ ಕೊಟ್ಟಾರಿ, ಅಹ್ಮದ್ ಶಕೀರ್ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು

