ಪೊಳಲಿ: ಇಲ್ಲಿನ ರಾಜರಾಜೇಶ್ವರೀ ದೇವಳದ ವಾರ್ಷಿಕ ಜಾತ್ರಾಮಹೋತ್ಸವ ನಡೆಯುತ್ತಿದ್ದು, ಇದರ ಅಂಗವಾಗಿ ಪ್ರಥಮ ಚೆಂಡು ಶನಿವಾರ ಪ್ರಾರಂಭಗೊಂಡಿತು.
ದೇವಾಸ್ಥಾನದಲ್ಲಿ ಜೀರ್ಣೋದ್ಧಾರದ ಪ್ರಕ್ರಿಯೆಗಳು ನಡೆಯುತ್ತಿದ್ದು, ಈ ಬಾರಿ ಸಾಂಕೇತಿಕವಾಗಿ ಚೆಂಡಿನ ಗದ್ದೆಯ ಸುಲ್ತಾನ್ ಕಟ್ಟೆಯವರೆಗೆ ತೆರಳಿ ಗುತ್ತಿನವರನ್ನು ಸ್ವಾಗತಿಸಲಾಯಿತು. ಬಳಿಕ ಮೂರು ಬಾರಿ ಚೆಂಡನ್ನುಹಾರಿಸಿ ತೆಗೆಯಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವಳದ ಪ್ರ. ಅರ್ಚಕ ಮಾಧವ ಭಟ್, ವಿಷ್ಣು ಮೂರ್ತಿ ನಟ್ಟೋಜ, ಅಮ್ಮುಂಜೆ ಗುತ್ತು ಡಾ.ಮಂಜಯ್ಯ ಶೆಟ್ಟಿ, ಉಳಿಪಾಡಿಗುತ್ತು ತಾರಾನಾಥ ಆಳ್ವ, ಮೊಗರು ಗುತ್ತು ವಸಂತ ಶೆಟ್ಟಿ, ರಮೇಶ್ ರಾವ್, ಕೃಷ್ಣ ಕುಮಾರ್ ಪೂಂಜ, ಕೃಷ್ಣ ರಾಜ್, ಜೀವರಾಜ್ ಶೆಟ್ಟಿ, ವಾಸುದೇವ್ ಭಟ್, ಕೃಷ್ಣಪ್ಪ ಸಪಲಿಗ ಹಾಗೂ ಗಂಗಾಧರ ಜೋಗಿ ,ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು.
ಐದು ದಿನಗಳ ಕಾಲ ಚೆಂಡು ಉತ್ಸವ ನಡೆಯಲಿದ್ದು, ಕೊನೆ ಚೆಂಡು ಏ.11ರಂದು ನಡೆಯಲಿದೆ.





