salman_650x400_41522904392

ಜೋಧಪುರ(ರಾಜಸ್ತಾನ): ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಆರೋಪ ಸಾಬೀತಾಗಿ 5 ವರ್ಷ ಶಿಕ್ಷೆಗೆ ಒಳಗಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

20 ವರ್ಷಗಳ ಹಿಂದೆ ದಾಖಲಗಿದ್ದ ಪ್ರಕರಣದ ಸುದೀರ್ಘ ವಿಚಾರಣೆ ನಂತರ   ಎರಡು ದಿನಗಳ ಹಿಂದೆ ಸಲ್ಮಾನ್ ಖಾನ್ ಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಅದೇ ದಿನ ಜೋಧಪುರ ಸೆಂಟ್ರಲ್ ಜೈಲಿನಲ್ಲಿ ಒಂದನೇ ಬ್ರಾರಾಕ್ ಗೆ ಕಳಿಸಲ್ಪಟ್ಟಿದ್ದ ಸಲ್ಲು ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದ್ದರು.

ಹೀಗಾಗಿ ಎರಡು ದಿನಗಳ ಕಾಲ ಜೈಲಿನಲ್ಲಿಯೇ ಕಾಲ ಕಳೆದಿದ್ದ ಸಲ್ಮಾನ್  ಖಾನ್ ಗೆ ಶನಿವಾರ  ಅಂತೂ ನಿರಾಳತೆ ಸಿಕ್ಕಿದೆ.

ಜೈಲು ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಿರುವ ನ್ಯಾಯಾಧೀಶ ರವೀಂದ್ರ ಜೋಸಿ ಅವರು , 50 ಸಾವಿರ ರೂ. ಮೊತ್ತದ ಬಾಂಡ್ ನೀಡುವಂತೆ ಸಲ್ಲುಗೆ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *