Ektaಮುಂಬೈ: ಒನ್ಸ್ ಅಪೋನ್ ಎ ಟೈಮ್ ಇನ್ ಮುಂಬೈನಂತ ಯಶಸ್ವಿ ಸಿನಿಮಾ ನಿಮರ್ಿಸಿರುವ ಏಕ್ತಾ ಕಪೂರ್ ಸದ್ಯ ಹೊಸ ಸಾಹಸವೊಂದಕ್ಕೆ ಕೈ ಹಾಕಲಿದ್ದಾಳೆ.
ಇಮ್ರಾನ್ ಖಾನ್ ಹಾಗೂ ದೀಪಿಕಾ ಪಡುಕೋಣೆಯ ‘ಬ್ರೇಕ್ ಕೆ ಬಾದ್’ ಚಿತ್ರ ನಿದರ್ೇಶಿಸಿರುವ ಡ್ಯಾನಿಶ್ ಅಸ್ಲಾಂ ಜೊತೆಗೂಡಿ ಸಲಿಂಗಿಗಳ ಬಗೆಗೊಂದು ಚಿತ್ರ ನಿಮರ್ಿಸಲು ಏಕ್ತಾ ಮುಂದಾಗಿದ್ದಾಳೆ. ಇದಕ್ಕೆ ಈಗಾಗಲೇ ಕತೆ ಸಿದ್ಧವಾಗುತ್ತಿದ್ದು ಅಲಿ ಝಫರ್ ಹಾಗೂ ಅದಿತಿ ರಾವ್ ಹೈದರಿ ನಟಿಸಿರುವ ಲಂಡನ್ ನ್ಯೂಯಾಕರ್್ ಪ್ಯಾರಿಸ್ ಚಿತ್ರವನ್ನು ನಿದರ್ೇಶಿಸಿ ಕೈ ಸುಟ್ಟುಕೊಂಡಿರುವ ಅನು ಮೆನನ್ ಚಿತ್ರಕತೆ ಬರೆಯುತ್ತಿದ್ದಾರೆ. ಈ ಚಿತ್ರವು ಸಲೀಂ ಅನಾರ್ಕಲಿ ಕಥಾ ಹಂದರವನ್ನು ಹೊಂದಿದ್ದು ಅದಕ್ಕೆ ಸಲಿಂಗ ಪ್ರೇಮದ ಟ್ವಿಸ್ಟ್ ನೀಡಿರುವುದಾಗಿ ಡ್ಯಾನಿಶ್ ತಿಳಿಸಿದ್ದಾರೆ. ಸದ್ಯ ಈ ಚಿತ್ರ ಇನ್ನಷ್ಟೇ ಸೆಟ್ಟೇರಲಿದ್ದು ಬಿಡುಗಡೆಗೆ ಕೆಲವು ತಿಂಗಳ ಕಾಲ ಕಾಯಬೇಕಾಗಿದೆ

By suddi9

Leave a Reply

Your email address will not be published. Required fields are marked *