858

ಧಾರವಾಡ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟಂಬಗಳ ಮಧ್ಯೆ ಮಾರಾಮಾರಿ ನಡೆದ ಮೂವರು ಗಾಯಗೊಂಡ ಘಟನೆ ರವಿವಾರ ರಾತ್ರಿ ನಡೆದಿದೆ.

ಹನೀಪ್ ಮುಲ್ಲಾ ಹಾಗೂ ಅಸ್ಲಾಂ ಮುಲ್ಲಾ ಎಂಬ ಎರಡು ಕುಟುಂಬಗಳ ಮಧ್ಯೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಸಂಭವಿಸಿದೆ. ಈ ಎರಡೂ ಕುಟುಂಬದವರು ಸಂಬಂಧಿಕರೇ ಆಗಿದ್ದು, ಸಂಬಂಧವನ್ನೂ ಮರೆತು ಮಾರಕಾಸ್ತ್ರಗಳಿಂದ ಹೊಡೆದಾಡಿದ್ದಾರೆ. ಜಗಳದ ಸಂದರ್ಭದಲ್ಲಿ ಹನೀಫ್ ಮುಲ್ಲಾ ಎಂಬಾತ ತಲ್ವಾರ್ ನಿಂದ ಅಸ್ಲಾಂ ಮುಲ್ಲಾ, ಖುತುಬ್ ಮುಲ್ಲಾ ಹಾಗೂ ಸದ್ದಾಂ ಮುಲ್ಲಾ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

8569

ಇದರಿಂದ ಈ ಮೂವರಿಗೂ ತಲೆ, ಕುತ್ತಿಗೆ ಹಾಗೂ ಕೈಗೆ ತೀವ್ರ ಸ್ವರೂಪದ ಪೆಟ್ಟಾಗಿದೆ. ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕುಟುಂಬದವರು ಮಾರಾಮಾರಿ ನಡೆಸಿದ್ದು, ಈ ಘಟನೆಯಲ್ಲಿ ಎರಡೂ ಕುಟುಂಬದವರಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *