444

ಹಾಸನ : ನಗರದ ಪ್ರಸಿದ್ಧ ಹಾಸನಾಂಬ ದೇವಾಲಯದ ಮೇಲೂ ಕಳ್ಳರ ಕಣ್ಣು ಬಿದ್ದಿದ್ದು, ರವಿವಾರ ರಾತ್ರಿ ದೇವಾಲಯದ ಬಾಗಿಲು ಮುರಿದು ಕಳ್ಳರು ಒಳಗೆ ನುಗ್ಗಲು ಯತ್ನಿಸಿರು ಘಟನೆ ನಡೆದಿದೆ.

ದೇಗುಲದ ಬಾಗಿಲು ಒಡೆದಿರುವ ಕಳ್ಳರು ಒಳಪ್ರವೇಶಿಸಲು ಪ್ರಯತ್ನಿಸಿದ್ದಾರೆ. ದೇವಾಲಯದಲ್ಲಿ ಸದ್ಯ ಯಾವ ವಸ್ತುಗಳೂ ಕಳವಾಗಿಲ್ಲ. ಅಲ್ಲದೆ, ರಾತ್ರಿ ದೇಗುಲದ ಬಾಗಿಲು ಹಾಕುವ ವೇಳೆ ಒಳಗೆ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಇಟ್ಟಿರಲಿಲ್ಲ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ದೇಗುಲದ ಆಡಳಿತ ಮಂಡಳಿ ಮುಖ್ಯಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ.

By suddi9

Leave a Reply

Your email address will not be published. Required fields are marked *