ಚಿಕ್ಕಬಳ್ಳಾಪುರ: ಕೆರೆಗೆ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣ ಹೊರವಲಯದ ಅಮಾನಿ ಭೈರಸಾಗರ ಕೆರೆಯಲ್ಲಿ ನಡೆದಿದೆ.
ಮರುಳಿಮೋಹನ್(16) ಹಾಗೂ ಕೇಶವ್(16) ಮೃತ ಬಾಲಕರು ಎಂದು ಗುರುತಿಸಲಾಗಿದೆ.
ಮರುಳಿಮೋಹನ್(16) ಹಾಗೂ ಕೇಶವ್ ಸೇರಿ 8 ಮಂದಿ ಸ್ನೇಹಿತರು ಕರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಇಬ್ಬರು ಕೆರೆಯಲ್ಲಿ ಮುಳುಗಿ ತುಂಬಾ ಸಮಯವಾದ್ರೂ ಮೇಲೆ ಬರಲಿಲ್ಲ. ಹೀಗಾಗಿ ಸ್ನೇಹಿತರು ಗಾಬರಿಗೊಂಡು ವಿಷಯವನ್ನ ಸ್ಥಳೀಯರಿಗೆ ತಿಳಿಸಿದ್ದಾರೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗುಡಿಬಂಡೆ ಪೊಲೀಸರು ಹಾಗೂ ಆಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿ ಮರುಳಿಮೋಹನ್ ಮೃತದೇಹ ಹೊರತೆಗೆದಿದ್ದಾರೆ.
ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

