ಕಲಬುರಗಿ: ಜಿಲ್ಲೆಯ ಕುರಿಕೊಟಾ ಬ್ರಿಡ್ಜ್ ಮೇಲಿಂದ ಹಾರಿ ಎನ್ ಇ ಕೆಎಸ್ಸಾರ್ಟಿಸಿ ಸಿಬ್ಬಂದಿ ಕಲಬುರ್ಗಿ ವಿಭಾಗೀಯ ಕಚೇರಿ ಕ್ಲಾರ್ಕ್ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಸಂಜೆ ನಡೆದಿದೆ.
ಶಿವಾಜಿ ನಗರ ನಿವಾಸಿ ನಾಗೇಶ ಅಲಿಯಾಸ್ ಅಕ್ಷಯ (23) ತoದೆ- ತಾಯಿ ಸಾವಿನಿಂದ ಮನನೊಂದು ಆತ್ಮಹತ್ಯೆ ಶರಣಾಗಿದ್ದಾನೆ. ಸೋಮವಾರ ಬೆಳಿಗ್ಗೆ 9 ಗಂಟೆಗೆ ಮಹಗಾಂವ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ.
ಈ ಸಂಬಂಧ ಮಹಾಗಾಂವ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

