4cd620d886a357e0206221474f425d7b

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ತಮ್ಮ 43ನೇ ವರ್ಷದ ಹುಟ್ಟುಹಬ್ಬದ ಸಂಭ್ರದಲ್ಲಿದ್ದು, ಇದೇ ವೇಳೆ ಅವರು ತಮ್ಮ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ನೆನದು ಕಣ್ಣೀರಿಟ್ಟ ಘಟನೆ ನಡೆದಿದೆ.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆಯಲ್ಲಿ ಅಮ್ಮ ಇಲ್ಲ ಅನ್ನೋದೇ ಬೇಸರದ ಸಂಗಂತಿ. ಈ ಬಾರಿ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಬಾರಿ ಅವರು ನಮ್ಮ ಜೊತೆ ಇಲ್ಲ. ಜೀವನದಲ್ಲಿ ಏನೇ ಸಾಧಿಸಿದ್ರೂ, ಅದಕ್ಕೆ ಅವರೇ ಕಾರಣ. ಹೀಗಾಗಿ ತುಂಬಾ ವಿಚಾರಗಳಲ್ಲಿ ಅಪ್ಪ-ಅಮ್ಮನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದರು.

ಇನ್ನು ರಾಜ್ ಕುಮಾರ್ ಅವರನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ಅವರ ಮಗನಾಗಿರುವುದು ನನ್ನ ಪುಣ್ಯ. ಆ ಪ್ರೀತಿ, ವಿಶ್ವಾಸ, ಅಭಿಮಾನ ನಮ್ಮ ಕುಟುಂಬದಲ್ಲಿ ಎಲ್ಲರೂ ನೋಡುತ್ತಿದ್ದಾರೆ. ಅದಕ್ಕೆ ನಾವು ಅವರಿಗೆ ಯಾವತ್ತೂ ಚಿರಋಣಿ ಎಮದು ಸ್ಮರಿಸಿದರು.

 

By Suddi9

Leave a Reply

Your email address will not be published. Required fields are marked *