ಪುತ್ತೂರು: ಉತ್ತರಪ್ರದೇಶದಲ್ಲಿ ಆಗಿರುವ ಬದಲಾವಣೆ ರಾಜ್ಯದಲ್ಲಿ ಮುಂದೆ ನಡೆಯುವ ಚುನಾವಣೆಗೂ ದಿಕ್ಸೂಚಿಯಾಗಲಿದೆ ಎಂದು ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಶನಿವಾರ ತಾಲೂಕಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲದಿನಗಳ ಹಿಂದೆ ದೇಶದಾದ್ಯಂತ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿದೆ. ಇನ್ನು ಮುಂದೆ ಜನರನ್ನು ವಂಚಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಲಿನಿಂದಾಗಿ ಬಿಜೆಪಿ ಮಲಗಿದ್ದು, ಇನ್ನು ಏಳುವುದು ಕಷ್ಟ. ಬಿಜೆಪಿಯವರು ಪರ್ಯಾಯವಾಗಿ ಬೇರೆಯವರನ್ನು ಹುಡುಕಬೇಕು ಎಂದು ಟೀಕಿಸಿದರು.

