ಪೊಳಲಿ:ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 14ರಂದು ರಾತ್ರಿ ದ್ವಜರೋಹಣಗೊಂಡು 30 ದಿನಗಳ ಜಾತ್ರೆ ನಡೆಯಲಿದೆ.
ಮಾರ್ಚ್ 15ರಂದು ಬೆಳಗ್ಗೆ ದೀಪದ ಬಳಿ ಕಂಚಿಲು ಸೇವೆಯೊಂದಿಗೆ ಚಿಕ್ಕ ರಥದಲ್ಲಿದೇವರ ಉತ್ಸವ ಮೂರ್ತಿಯನ್ನು ದೇವಳದ ರಥ ಬೀದಿಯಲ್ಲಿ ಎಳೆಯಲಾಯಿತು. ನಂತರ ನಟ್ಟೋಜರು ಹಿಂಗಾರದ ಹಾಳೆಯೊಂದಿಗೆ ಗೋಪುರದ ಮುಂಭಾಗದಲ್ಲಿ ಸೇರಿಗಾರನ ಕೈಯಲ್ಲಿ ಕೊಟ್ಟು ಕಿವಿಯಲ್ಲಿ ಆರಢದ ದಿನವನ್ನು ತಿಳಿಸುತ್ತಾರೆ. ನಂತರ ಸೇರಿಗಾರನು ಸೋಮಕಾಸುರ ಮತ್ತು ರಂಜಕಾಸುರನ ವೇಷದಲ್ಲಿದ್ದ ಪಂಬದನ ಕೈಯಲ್ಲಿ ಶೇರಿಗಾರನು ಹಿಂಗಾರದ ಹಾಳೆಯನ್ನು ಕೊಟ್ಟು ಕಿವಿಯಲ್ಲಿ ಗುಟ್ಟಾಗಿ ಆರಡದ ದಿನವನ್ನು ತಿಳಿಸುತ್ತಾನೆ.

ಆಗ ಸಾವಿರ ಸೀಮೆಯ ಭಕ್ರರು ಅಮ್ಮನವರ ಜಾತ್ರೆಯ ದಿನ ತಿಳಿದುಕೊಳ್ಳಲು ಬಹಳ ಕುತುಹಲದಿಂದ ಕಾದು ಕುಳಿತ್ತಿರುತ್ತಾರೆ. ಆಗ ಪಂಬದನು ಮೂರು ಬಾರಿ ಕೂಗಿ “ಮುಪ್ಪ ಪೊಪಿನಾನಿ ಆರಡ” (ಮುವತ್ತು ದಿವಸದ) ಅಂತ ತುಳುವಿನಲ್ಲಿ ಜೋರಾಗಿ ಹೇಳುತ್ತಾನೆ ಈಗೆ ಪೊಳಲಿ ಜಾತ್ರೆಯ ಒಂದು ತಿಂಗಳ ಜಾತ್ರೆಯ ಗೌಪ್ಯವಾಗಿಡಲಾದ ದಿನವನ್ನು ತಿಳಿಸುತ್ತಾರೆ. ಈ ಸಲ 30 ದಿನದ ಜಾತ್ರೆ ನಡೆಯಲಿದೆ ಏಪ್ರಿಲ್ 7ರಂದು ಶನಿವಾರ ಪ್ರಥಮ ಚೆಂಡು,8 ರಂದು ಭಾನುವಾರ ಎರಡನೆ ಚೆಂಡು, 9 ರಂದು ಸೋಮವಾರ ಮೂರನೆ ಚೆಂಡು, 10ರಂದು ಮಂಗಳವಾರ ನಾಲ್ಕನೇ ಚೆಂಡು, 11 ರಂದು ಬುಧವಾರ ಕಡೆ ಚೆಂಡು, 12 ರಂದು ಗುರುವಾರ ರಥೋತ್ಸವ ನಡೆಯಲಿದೆ.13 ರಂದು ಶುಕ್ರವಾರ ಆರಡ ಈಗೇ ಮುವತ್ತು ದಿನದ ಜಾತ್ರೆಯು ನಡೆಯಲಿದೆ.
