ಕೈಕಂಬ: ತೆಂಕ ಎಡಪದವು ಗ್ರಾಮದ ಶಿಬ್ರಿಕೆರೆಯ ಪಟ್ಲಚ್ಚಿಲ್ ನಿವಾಸಿ ಶ್ರೀನಿವಾಸ ಪೂಜಾರಿ ಕಳೆದ ಎರಡು ವರ್ಷದಿಂದ ಶ್ವಾಸಕೋಸದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಲಕ್ಷಾಂತರ ರೂ ಕರ್ಚು ಮಾಡಿದರೂ ಇದುವರೆಗಿನ ಚಿಕಿತ್ಸೆ ಫಲಕಾರಿಯಾಗಿಲ್ಲ. ಪರಿಣಾಮ, ಕುಟುಂಬ ಚಿಕಿತ್ಸೆಗಾಗಿ ಆರ್ಥಿಕ ಮುಂಗಟ್ಟು ಎದುರಿಸುವಂತಾಗಿದೆ.7vpsrinivasa poojary

ಶ್ರೀನಿವಾಸ ಪೂಜಾರಿಯವರಿಗೆ ಪುಟ್ಟ ಹೆಣ್ಣು ಮಗುವೊಂದಿದ್ದು, ಇದುವರೆಗಿನ ಕರ್ಚನ್ನು ಪತ್ನಿ ಭರಿಸಿಕೊಂಡು ಈಗ ಕೈಸೋತಿದ್ದಾರೆ. ಕಂಕನಾಡಿ ಸಹಿತ ಮಂಗಳೂರಿನ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಗುಣಮುಖವಾಗದ ಹಾಗೂ ಹಣಕಾಸಿನ ಸಮಸ್ಯೆಯಿಂದ ಈಗ ಆಯುರ್ವೇದ ಮದ್ದು ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ಕೃಶವಾಗುತ್ತಿರುವ ಅವರು ಬದುಕುವ ಲಕ್ಷಣಗಳು ಕಡಿಮೆಯಾಗಿದ್ದು, ಪತ್ನಿ ಕಂಗಾಲಾಗಿದ್ದಾರೆ. ಪುತ್ರಿಗಾದರೂ ಒಂದಷ್ಟು ಸಮಯ ಬದುಕಬೇಕೆಂದುಕೊಂಡಿರುವ ಪೂಜಾರಿಯ ಚಿಕಿತ್ಸೆ ಮತ್ತು ಆಸೆಗೆ ದಯಾಳುಗಳು ನೆರವಾಗಬೇಕಾಗಿ ಕಳಕಳಿಯ ವಿನಂತಿ. ನಮ್ಮ ಬ್ಯಾಂಕ್ ಖಾತೆ ವಿವರ ಇಂತಿದೆ : ಶ್ರೀನಿವಾಸ ಪೂಜಾರಿ, ವಿಜಯಾ ಬ್ಯಾಂಕ್, ಬಡಗ ಮಿಜಾರು ಶಾಖೆ, ಖಾತೆ ಸಂಖ್ಯೆ : 101501051000002, ಐಎಫ್‍ಎಸ್‍ಸಿ ಕೋಡ್ :  ವಿಐಜೆ 80001015.

 

By suddi9

Leave a Reply

Your email address will not be published. Required fields are marked *