ಮಂಗಳುರು: ಕಳೆದ ಕೆಲವು ವರ್ಷಗಳಿಂದ ಕಟೀಲು ಮೂರನೇ ಮೇಳದಲ್ಲಿ ಮದ್ದಳೆವಾದಕರಾಗಿ ಸೇವೆಸಲ್ಲಿಸುತ್ತಿದ್ದ ಯುವ ಯಕ್ಷಗಾನ ಕಲಾವಿದ ಚೇತನ್ ಯಾನೆ ದೇವದಾಸ್ ಶೆಟ್ಟಿಗಾರ್ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.
ಕಟೀಲು ಮೂರನೇ ಮೇಳದ ಸುಪ್ರಸಿದ್ಧ ಚೆಂಡೆ – ಮದ್ದಳೆವಾದಕರಾದ ಮಿಜಾರು ಮೋಹನ ಶೆಟ್ಟಿಗಾರ್ ರ ಪುತ್ರ ಚೇತನರು ಕ್ಷಯ ರೋಗದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕೆಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಕಲಾವಿದರಾದ ಚೇತನ್ ಶೆಟ್ಟಿಗಾರರ ಅಕಾಲಿಕ ನಿಧನ ಯಕ್ಷರಂಗಕ್ಕೆ ದುಃಖ ತಂದಿದೆ ಮೃತರ ಆತ್ಮಕ್ಕೆ ಸಾಯುಜ್ಯ ದೊರಕಲಿ ಹಾಗೂ ಅವರ ಕುಟುಂಬಸ್ಥರಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
