ಕಾರವಾರ: ಟ್ಯಾಂಕರ್ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟು, 6ಮಂದಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬಳಿ ನಡೆದಿದೆ.
ಮೃತರನ್ನು ಅಣ್ಣಪ್ಪ ಎಮದು ಗುರುತಿಸಲಾಗಿದೆ..
ಅಣ್ಣಪ್ಪ ಸೇರಿ ಸುಮಾರು 7 ಮಂದಿ ಕಾರಿನಲ್ಲಿ ಶಿರಸಿಗೆ ತೆರೆಳುತ್ತಿದ್ದ ವೇಳೆ ಭಟ್ಕಳ ಕಡೆಗೆ ಬುತ್ತಿದ್ದ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ಪರಿಣಾಮ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಉಪ್ಪುಗುಂದ ಮೂಲದ ಕಾರು ಕುಂದಾಪುರದಿಂದ ಶಿರಸಿಗೆ ಹೋಗುತಿತ್ತು. ಟ್ಯಾಂಕರ್ ಭಟ್ಕಳ ಭಾಗಕ್ಕೆ ಬರುತ್ತಿತ್ತು. ಈ ವೇಳೆ ಮುರುಡೇಶ್ವರ ಬಳಿಯ ಮಾವಿನಕಟ್ಟೆ ಕ್ರಾಸ್‍ನ ಬಳಿ ಟ್ಯಾಂಕರ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಮೂರು ಮಕ್ಕಳು ಸೇರಿ ಆರು ಜನರಿಗೆ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಪ್ರಭಾಕರ್, ನಾಗವೇಣಿ, ಸುಬ್ರಹ್ಮಣ್ಯ, ಮುಕುಂದ ತೀವ್ರವಾಗಿ ಗಾಯಗೊಂಡವರಾಗಿದ್ದು, ಗಾಯಾಳುಗಳನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಮೂರು ಜನರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ನಲ್ಲಿ ಸುಮಾರು 4000 ಲೀ. ಪೆಟ್ರೋಲ್ ಮತ್ತು 8000 ಡೀಸೆಲ್ ಇದ್ದುದ್ದರಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನಗಳ ಓಡಾಟ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

