ಮಂಗಳೂರು: ಸರಕಾರಿ ಪ್ರಕಟಣೆಯಂತೆ ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ಖಒಖ ಮೂಲಕ ನವೀಕರಣ ಮಾಡದೇ ಇರುವವರ ಸಂಖ್ಯೆ 60 ಲಕ್ಷಕ್ಕೂ ಮಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪಿಎಲ್ 1,86,926, ಬಿಪಿಎಲ್ 1,72,723, ಅಂತ್ಯೋದಯ 29,332 ಮತ್ತು ಉಡುಪಿ ಜಿಲ್ಲೆಯಲ್ಲಿ ಏಪಿಎಲ್ 1,08,297, ಬಿಪಿಎಲ್ 1,32,148, ಅಂತ್ಯೋದಯ 18,715 ಕಾಡರ್ುದಾರರಿದ್ದು ನವೀಕರಣ ಆಗದೇ ಇರುವ ಕಾಡರ್ುದಾರರು 1,80,634 ಆಗಿರುವುದು ಆದ್ದರಿಂದ ಎಪಿಕ್ ಆಧಾರಿತ ಪಡಿತರ ಚೀಟಿ ನವೀಕರಣಕ್ಕೆ ಕಲಾವಕಾಶ ನೀಡಲು ಬಿಜೆಪಿ ಒತ್ತಾಯಿಸಿದೆ.

ರಾಜ್ಯದಲ್ಲಿ 1.7 ಕೋಟಿ ಕಾಡರ್ುದಾರರಿದ್ದು ಇದುವರೆಗೆ 5 ಲಕ್ಷ ಬೋಗಸ್ ಕಾಡರ್ುದಾರರನ್ನು ಪತ್ತೆಹಚ್ಚಲಾಗಿದ್ದು ಈಗ ಹೊಸದಾಗಿ ಬಿಪಿಎಲ್ಗೆ 30 ಲಕ್ಷ ಅಜರ್ಿ ಸಲ್ಲಿಕೆಯಾಗಿದೆ. ಇದರಲ್ಲಿ 9 ಲಕ್ಷ ವಿತರಣೆ ಹಂತದಲ್ಲಿದೆ ಎಂದು ಸರಕಾರಿ ಪ್ರಕಟಣೆಗಳು ಹೇಳುತ್ತವೆ.
ರಾಜ್ಯದಲ್ಲಿ ಖಒಖ ಮೂಲಕ ನವೀಕರಣ ಮಾಡುವ ಅವಧಿ ಮುಗಿದಿದ್ದು ನಕಲಿ ಕಾಡರ್ುದಾರರನ್ನು ಹುಡುಕುವ ನೆಪದಲ್ಲಿ ದೊಡ್ಡ ಪ್ರಮಾಣದಲ್ಲಿ ಅಮಾಯಕರು ಸಿಕ್ಕಿ ಹಾಕಿಕೊಂಡಿದ್ದು ನೈಜ ಕಾಡರ್ುದಾರರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಆಧಾರ್ ಅಥವಾ ಎಪಿಕ್ ಕಾಡರ್ುದಾರರನ್ನು ಆಹಾರ ಇಲಾಖೆಯ ಮೇಲುಸ್ತುವಾರಿಯಲ್ಲಿ ಆಯಾಯ ಗ್ರಾಮ ಪಂಚಾಯತ್ನ ಸಿಬ್ಬಂದಿಗಳ ಮೂಲಕ ಮನೆ ಮನೆ ಸಮೀಕ್ಷೆ ನಡೆಸಿ ಡಿಸೆಂಬರ್ 31ರ ತನಕ ಕಾಲಾವಕಾಶ ನೀಡಿ ಜನರಿಗೆ ನ್ಯಾಯ ಒದಗಿಸಬೇಕೆಂದು ದ.ಕ ಜಿಲ್ಲಾ ಬಿಜೆಪಿ ಘಟಕ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಜಿಲ್ಲೆಯಲ್ಲಿ ಬಸವ ವಸತಿ, ಆಶ್ರಯ, ಭಾಗ್ಯಲಕ್ಷ್ಮಿ ಯೋಜನೆಗಳ ಅಡಿಯಲ್ಲಿ ಮಂಜೂರಾತಿ ದೊರೆತು ಅನುದಾನ ಸಿಗದಿರುವ ಫಲಾನುಭವಿಗಳು ಸಾವಿರಾರು ಸಂಖ್ಯೆಯಲ್ಲಿದ್ದು ಇವರಿಗೆ ತಕ್ಷಣ ಅನುದಾನ ಬಿಡುಗಡೆಗೊಳಿಸಬೇಕೆಂದು ಜಿಲ್ಲಾ ವಕ್ತಾರ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
