news-28-deve-gowda

ಶಹಾಪುರ: ಕಾಂಗ್ರೆಸ್‌, ಬಿಜೆಪಿ ಬರೀ  ಸುಳ್ಳು ಆಸ್ವಾಸನೆ ನೀಡುತ್ತಾ ಬಂದಿವೆ. ಕೇಂದ್ರ, ರಾಜ್ಯ ಸರ್ಕಾರದ ಆಡಳಿತದಿಂದ ಜನರು ರೋಸಿ ಹೊಗಿದ್ದಾರೆ, ಪಾರದರ್ಶಕ ಆಡಳಿತ ಕೇವಲ ಜೆಡಿಎಸ್ ನಿಂದ ಮಾತ್ರ ಸಾಧ್ಯ. ಆದ್ದರಿಂದ ಜೆಡಿಎಸ್ ಗೆ ಒಮ್ಮೆ ಅಧಿಕಾರ ಕೊಟ್ಟು ನೋಡಿ ಎಂದು ಮಾಜಿ ಪ್ರದಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೆಗೌಡ ಮನವಿ ಮಾಡಿದ್ದಾರೆ.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಮಂಗಳವಾರ ಜರುಗಿದ ಜೆಡಿಎಸ್ ಕಾರ್ಯಕರ್ತರ ಬೃಹತ್‌‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯ ಮಂತ್ರಿ ಎಚ್.ಡಿ.  ಕುಮಾರಸ್ವಾಮಿ ಮಾತನಾಡಿ,  ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರಿಂದ ರಾಜ್ಯ ಅಭಿವೃದ್ಧಿ ಹೊಂದಲು ಸಾದ್ಯವಿಲ್ಲ. ರಾಷ್ಟ್ರೀಯ ಪಕ್ಷಗಳು ಜನರಿಗೆ ಸುಳ್ಳು ಭರವಸೆ ನೀಡಿ ಮೋಸ ಎಸಗುತ್ತಿವೆ ಎಂದು ಆರೋಪಿಸಿದರು.

ಈ ವೇಳೆ 50  ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು, ಹೆಚ್ಚಿನ ಪೋಲಿಸ್ ಬಿಗಿ ಬಂದೋಬಸ್ತ ಒದಗಿಸಲಾಗಿತ್ತು.

ಈ ಸಂಧರ್ಭದಲ್ಲಿ ಬಂಡೆಪ್ಪ ಕಾಶಂಪುರೆ,ಬಸವರಾಜ ಹೊರಟ್ಟಿ,ಮಾಜಿ ಸಚಿವ ವಿಶ್ವನಾಥ್, ಎ,ಎಸ್ ಪಾಟೀಲ್ ನಡಹಳ್ಳಿ, ಶಹಾಪುರ ಜೆಡಿಎಸ್ ಅಭ್ಯರ್ಥಿ ಅಮೀನರಡ್ಡಿ ಪಾಟೀಲ್ ಯಾಳಗಿ,ಬಸವರಾಜಪ್ಪ ವಿಭೂತಿಹಳ್ಳಿ, ವಿಠ್ಠಲ ವಗ್ಗಿ, ಬಸವರಾಜ ಅರುಣಿ ಇತರರು ಇದ್ದರು.

By Suddi9

Leave a Reply

Your email address will not be published. Required fields are marked *