ವಿಜಯಪುರ: ಭೀಕರ ರಸ್ತೆ ಅಪಘಾತವೊಂದರಲ್ಲಿ 6 ಮಂದಿ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ದಾರುಣ ಘಟನೆ ಮಹಾರಾಷ್ಟ್ರದ ತುಳಜಾಪುರ ಬಳಿ ನಡೆದಿದೆ.
ಅಮೀರಮ್ಜಾ ಲಾಳೆಸಾಬ್(50), ಟಿಪ್ಪು ಉಮರಸಾಬ್ ಚಪ್ಪರಬಂದ(23) ಮತ್ತು ಅಬ್ದುಲಸಾಬ್ ಹುಸೇನಸಾಬ್ ಚಪ್ಪರಬಂದ್(40) ಮೂವರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.
ಇನ್ನು ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸೊಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

