IMG-20180223-WA0043

ಬೆಂಗಳೂರು: ಹಿರಿಯ ಸ್ತ್ರೀ ವಾದಿ, ಚಿಂತಕಿ ಹಾಗೂ ಮಹಿಳಾಪರ ಲೇಖಕ ವಿಜಯಾ ದಬ್ಬೆ ಉಸಿರಾಟದ ತೊಂದರೆಯಿಂದ  ಇಲ್ಲಿನ ವಿಜಯನಗರದ ಮೊದಲ ಹಂತದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಿ ಎಂಬ ಹೆಗ್ಗಳಿಕೆ ಇವರದ್ದು. 12ಕ್ಕೂ ಹೆಚ್ಚು ಕೃತಿಗಳನ್ನು ಹಾಗು 60ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಇರುತ್ತವೆ ಕವನ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿ ಲಭಿಸಿದೆ.

ಇವರ “ಇತಿಗೀತಿಕೆ” ಕವನಸಂಕಲನಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ 1996ರ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿಯ ತೃತೀಯ ಬಹುಮಾನ ಲಭಿಸಿದೆ.

ವಿಜಯಾ ದಬ್ಬೆಯವರು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿದ್ದು, ಪುಸ್ತಕ ಪ್ರಕಟಣೆ ಸಾಹಿತ್ಯ ಪತ್ರಿಕೆಯ ಸಂಪಾದಕಿ ಸಹ ಆಗಿದ್ದಾರೆ.

ಮೈಸೂರು ವಿ.ವಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕಿಯಾಗಿದ್ದ ವಿಜಯಾ ದಬ್ಬೆ, ಕವನ ಸಂಕಲನ, ಪ್ರವಾಸ ಕಥನ, ವಿಮರ್ಶೆ ಹಾಗೂ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

‘ಇರುತ್ತವೆ’ ‘ನೀರು ಲೋಹದ ಚಿಂತೆ’ ಪ್ರಮುಖ ಕವನ ಸಂಕಲನಗಳು. ‘ನಾರಿ ದಾರಿ ದಿಗಂತ’ ‘ಮಹಿಳಾ ಸಾಹಿತ್ಯ ಸಮಾಜ’ ಪ್ರಮುಖ ವಿಮರ್ಶಾ ಕೃತಿಗಳು. ‘ಅತ್ತಿಮಬ್ಬೆ ಪ್ರಶಸ್ತಿ’, ‘ಅನುಪಮಾ ಪ್ರಶಸ್ತಿ’ ಹಾಗೂ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಪುರಸ್ಕೃತರು. ಮಹಿಳಾ ಚಳವಳಿ ಕಟ್ಟಲು ಅವಿರತವಾಗಿ ಶ್ರಮಿಸಿದ್ದರು.

ಮೃತರು 6 ಸಹೋದರಿಯರು, ಇಬ್ಬರು ಸಹೋದರರನ್ನು ಅಗಲಿದ್ದಾರೆ.

 

 

By Suddi9

Leave a Reply

Your email address will not be published. Required fields are marked *