ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವರ ಸಂಬಂಧಪಟ್ಟ ಇತರ ಸಾನ್ನಿದ್ಯಾಧಿಗಳ ವಿಚಾರದಲ್ಲಿ ವಿಶೇಷವಾಗಿ ದೇವರ ವಾರ್ಷಿಕೋತ್ಸವ ಹಾಗೂ ಬ್ರಹ್ಮಕಲಶ ವಿಚಾರದಲ್ಲಿ ತ್ರೈಕಾಲಿಕಾಖಿಲಗುಣ ದೋಷಫಲಪರಿಜ್ಞಾನಾರ್ಥ ಪ್ರಾರ್ಥಿಸಿಟ್ಟ ತತ್ಕಾಲ ಪ್ರಶ್ನೆಯನ್ನು ಪದ್ಮನಾಭ ಶರ್ಮಾ, ಪ್ರಸಾದ್, ಉಣ್ಣಿ ಕೃಷ್ಣನ್ ರವರು   ಫೆ. 20ರಂದು ಮಂಗಳವಾರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ   ಪ್ರಶ್ನೆ ಇಡಲಾಯಿತು.20-8

20- 7

ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಕಾರಣ ಈ ವರ್ಷ ಬ್ರಹ್ಮಕಲಶೋತ್ಸವ ನಡೆಸದಿರಲು ತೀರ್ಮಾನಿಸಲಾಯಿತು.
ಮುಂದಿನ ವರ್ಷ 2019ಕ್ಕೆ ಬ್ರಹ್ಮಕಲಶೋತ್ಸವವನ್ನು ಹಾಗೂ ಈ ಬಾರಿ ಎಂದಿನಂತೆ ಒಂದು ತಿಂಗಳ `ಪೊಳಲಿ ಜಾತ್ರೆ’ ನಡೆಸಲು ನಿರ್ಧರಿಸಲಾಯಿತು.20-1

ದೇವಸ್ಥಾನದ ಜೀಣೋದ್ಧಾರ ನಿಮಿತ್ತ ದೇವರು ಬಾಲಾಲಯದಲ್ಲಿ ಇದ್ದ ಕಾರಣ ಜಾತ್ರೆಯ ಉತ್ಸವವನ್ನು ಬಾಲಾಲಯದ ಎದುರೆ ಅಡಿಕೆ ಮರದಲ್ಲಿ ತಾತ್ಕಾಲಿಕ ಧ್ವಜ ಹಾಕಿ ಧ್ವಜಾರೋಹಣ ನೆರವೇರಿಸಿ ಅಂತೆಯೇ ತಿಂಗಳ ಜಾತ್ರೆಯು ಯಥಾ ಸ್ಥಿತಿಯಲ್ಲೆ ನಡೆಯಲಿದೆ. ದಂಡಮಾಲೆ, 5 ದಿನದ ಚೆಂಡು, ರಥೋತ್ಸವದೊಂದಿಗೆ ರಥಬೀದಿಯನ್ನು ಆಶ್ರಯಿಸಿಕೊಂಡು ಜಾತ್ರೋತ್ಸವವು ನಡೆಯಲಿದೆ. ದೇವಳದ ಸಂಭಂದಪಟ್ಟ ಹೊರತು ಯಾವುದೇ ನೇಮ, ಕೋಲ  ಹೊರತುಪಡಿಸಿ ಎಲ್ಲಾ ಮಂಗಳಕಾರ್ಯಗಳನ್ನು  ಬ್ರಹ್ಮಕಲಶೋತ್ಸವದ ದಿನ ನಿಗದಿಪಡಿಸುವವರೆಗೆ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಮೊಕ್ತೇಸರ ತಾರನಾಥ ಆಳ್ವ ಉಳಿಪಾಡಿಗುತ್ತು, ಚೇರ ಸೂರ್ಯನಾರಾಯಣ ರಾವ್,  ಕೊಡಿಮಜಲ್ ಅನಂತಪದ್ಮನಾಭ ಉಪಾಧ್ಯಾಯ, ಮಾಧವ ಭಟ್, ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ಶಿಲ್ಪಿಗಳಾದ ಮಹೇಶ್ ಮುನಿಯಂಗಳ್, ಅನಂತ ಪದ್ಮನಾಭ ಭಟ್,ಪದ್ಮನಾಭ ಭಟ್,ವಿಷ್ಣುಮೂರ್ತಿ ಭಟ್,ಮಾಧವ ಮಯ್ಯ,ದೇವಳದ ಕಾರ್ಯನಿವಹಣಾಧಿಕಾರಿ ಪ್ರವೀಣ್, ಚಂದ್ರಪ್ರಕಾಶ್ ಶೆಟ್ಟಿ, ಸೇಸಪ್ಪ ಕೋಟ್ಯಾನ್ ಪಚಿನಡ್ಕ, ರಘುನಾಥ ಸೋಮಯಾಜಿ , ಶಕ್ತಿನಗರ ಗೋಪಲಕೃಷ್ಣ ದೇವಸ್ಥನದ ಮೊಕ್ತೇಸರ ಕೆ.ಸಿ.ನಾಯಕ್, ಬಲ್ಯೊಟ್ಟು ಶ್ರೀ ವಿಖ್ಯಾತನಂದ ಸ್ವಾಮೀಜಿ, ಕೃಷ್ಣರಾಜ ಮಾರ್ಲ, ಕೃಷ್ಣಕುಮಾರ್ ಪೂಂಜ,ಶಿವಪ್ರಸಾದ್‍ಶೆಟ್ಟಿ ಅಮ್ಮುಂಜೆಗುತ್ತು, ಪೊಳಲಿ ಗಿರಿಪ್ರಕಾಶ್‍ತಂತ್ರಿ, ವೆಂಕಟೇಶ್ ನಾವಡ, ಭುವನೇಶ್ ಪಚಿನಡ್ಕ, ಸುಬ್ರಾಯ ಕಾರಂತ, ಸಂಪತ್ ಕುಮಾರ್ ಶೆಟ್ಟಿ, ಚಂದ್ರಶೇಖರ ಭಂಡಾರಿ, ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *