46bb9d28f891a1a2f3252025ea24f7d7

ಮೈಸೂರು : ಬ್ಯಾಂಕ್ ಅಧಿಕಾರಿಗಳ ನೋಟಿಸ್ ಗೆ ಹೆದರಿ ರೈತ ಕುಟುಂಬವೊಂದು ವಿಷ ಸೇವಿಸಲು ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಹಾಡ್ಯ ಗ್ರಾಮದ ಶಿವಣ್ಣ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿದ್ದು, 3 ಹೆಣ್ಣುಮಕ್ಕಳು, ಪತ್ನಿ ಹಾಗೂ ಮಗನ ಜೊತೆ ಬ್ಯಾಂಕಿನ ಮುಂಭಾಗದಲ್ಲಿ ವಿಷ ಕುಡಿಯಲು ರೈತ ಮುಂದಾಗಿದ್ದಾರೆ. ಶಿವಣ್ಣ ಅವರನ್ನು ಮನವೊಲಿಸುವಲ್ಲಿ ರೈತ ಮುಖಂಡರು ಯಶಸ್ವಿಯಾಗಿದ್ದಾರೆ.

2011 ರಲ್ಲಿ ಶಿವಣ್ಣ ನಂಜನಗೂಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಮೀನಿನ ಪತ್ರಗಳನ್ನು ಅಡವಿಟ್ಟು ಟ್ರ್ಯಾಕ್ಟರ್ ಖರೀದಿಗಾಗಿ 7 ಲಕ್ಷ ರೂ. ಸಾಲ ಪಡೆದಿದ್ದರು. ಸ್ವಲ್ಪ ಸಾಲ ತೀರಿಸಿದ ಶಿವಣ್ಣ ಪೂರ್ತಿ ಹಣ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬ್ಯಾಂಕಿನ ಅಧಿಕಾರಿಗಳುಉ ಏಕಾಏಕಿ ನೋಟಿಸ್ ನೀಡದೆ ಟಾಂಟಾಂ ಹೊಡೆಸುವುದಾಗಿ ಬೆದರಿಕೆ ಹಾಕಿದ್ದರು.

ಹಾಗಾಗಿ ಶಿವಣ್ಣ ನಂಜನಗೂಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮುಂದೆ ವಿಷ ಸೇವಿಸಲು ಯತ್ನಿಸಿದ್ದಾರೆ.

By Suddi9

Leave a Reply

Your email address will not be published. Required fields are marked *