ಸುಳ್ಯ: ಶಾಲಾ ಬಸ್ಸಿನ ಚಕ್ರಕ್ಕೆ ಸಿಲುಕಿ ಗಂಭೀರಗೊಂಡಿದ್ದ ಬಾಲಕಿಗೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟ ಘಟನೆ ನಗರದ ಆಸ್ಪತ್ರಯಲ್ಲಿ ಘಟನೆ ನಡೆದಿದೆ.
ಅರಂತೋಡು ಗ್ರಾಮದ ಬಿಳಿಯಾರು ಕುಲ್ಚಾರ್ ನಿವಾಸಿ ಅಪ್ಪಕುಂಝಿ ಹಾಗೂ ಉಷಾ ದಂಪತಿಯ ಪುತ್ರಿ ಅಗನ್ಯ(6) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.
ಅಗನ್ಯ ಕೆವಿಜಿ ಐಪಿಎಸ್ ನಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಫೆ.12 ರ ಸಂಜೆ ಶಾಲೆ ಮುಗಿಸಿ ಶಾಲಾ ಬಸ್ಸಿನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಆಕೆಯ ಟಿಫಿನ್ ಬಸ್ ನಲ್ಲಿಯೇ ಉಳಿದುಕೊಂಡಿದ್ದರಿಂದ ಅದನ್ನು ತೆಗೆದುಕೊಳ್ಳಲು ಮುಂದಾದಾಗ ಚಾಲಕ ಧನಂಜಯ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದು, ಪರಿಣಾಮ ಅಗನ್ಯ ಚಕ್ರದಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಳು. ಬಳಿಕ ಪೋಷಕರು ಆಕೆಯನ್ನು ನಗರದ ಆಸ್ಪತ್ರೆಗೆ ದಾಖಲಿಸಾಲಿತ್ತು. ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಅಗನ್ಯ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಶಾಲಾ ಬಸ್ ನಲ್ಲಿ ನಿರ್ವಾಹಕ ಇಲ್ಲದಿರುವುದೂ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.

