accidentttt-697x325

ಬಾಗಲಕೋಟೆ:  ಕಾರು- ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೀರಿಕೇರಿ ಕ್ರಾಸ್ ಬಳಿ ಶನಿವಾರ ನಡೆದಿದೆ.

ಮೃತರನ್ನು ಜಿಲ್ಲೆಯ ಬೇವಿನಮಟ್ಟಿ ಗ್ರಾಮದ ನಿಂಗಪ್ಪ ಮಲ್ಲಾಡರ,  ಬಾಗವ್ವ ಸೊನ್ನದ ಎಂದು ಗುರುತಿಸಲಾಗಿದೆ.

ನಿಂಗಪ್ಪ ಅವರು ಜಿಲ್ಲೆಯ ಸಂಗೊಳ್ಳಿರಾಯಣ್ಣ ಯುವಘರ್ಜನೆ ಸಂಘಟನೆಯ ಅಧ್ಯಕ್ಷರಾಗಿದ್ದು, ಬೈಕ್ ನಲ್ಲಿ ಮೇಲೆ ಗ್ರಾಮದ ಕಡೆ ತೆರಳುತ್ತಿರುವಾಗ ಈ ಅವಘಡ ಸಂಭವಿಸಿದೆ.

ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *