ಕೈಕಂಬ:ಇತಿಹಾ±ಸ ಪ್ರಸಿದ್ಧ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ. 18ರಿಂದ ಫೆ. 25ರವರೆಗೆ ನಡೆಯಲಿದ್ದು. ಇದರ ಅಂಗವಾಗಿ ನಾನಾ ಕೇಂದ್ರಗಳಿಂದ ಫೆ.18 ರಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಕಡಂಬೋಡಿ ಮಹಾಬಲ ಪೂಜಾರಿ ಹೇಳಿದರು. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಹ್ಮಕಲಶೋತ್ಸವದಲ್ಲಿ ನಿತ್ಯ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವರು ಹಾಗಾಗಿ ಭಕ್ತರ ಸಹಕಾರದಿಂದಲೇ ಈ ಪುಣ್ಯ ಕಾರ್ಯ ನಡೆಯಬೇಕಾಗಿರುವುದಂದ ನಾನಾ ಕೇಂದ್ರಗಳಲ್ಲಿ ಭಕ್ತಾಧಿಗಳಿಂದ ಹಸಿರುಹೊರೆಕಾಣಿಕೆ ಸಂಗ್ರಹಿಸಲಾಗುತ್ತಿದೆಎಂದರು.
ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಶರಣ್ ಪಂಪ್ವೆಲ್ ಮಾತನಾಡಿ ಫೆ.10ರಂದು ಬೆಳಗ್ಗೆ ಹರಿನಾರಾಯಣ ಆಸ್ರಣ್ಣ ಹಾಗೂ ಗೋಪಾಲ ಕೃಷ್ಣ ಸಾಮಗರು ಶರವು ಹೊರೆಕಾಣಿಕೆ ಸಂಗ್ರಹಣಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ಫೆ.18ರಂದು ಮಧಾಹ್ನ 2.30 ಕ್ಕೆ ಶರವು ಶ್ರೀ ಮಹಾಗಣಪತಿ ದೇವಸ್ಥನದಲ್ಲಿ ಮೇಯರ್ ಕವಿತಾ ಸನಿಲ್ ಹಾಗೂ ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ ಬಿ ಪರಾಣಿಕ್ ಹೊರೆ ಕಾಣಿಕೆ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ನಂತರ ಕೇಂದ್ರ ಮೈದಾನದಿಂದ ಹೊರೆಕಾಣಿಕೆಯ ಮೆರವಣಿಗೆಯು ಹೊರಡಲಿದೆ ಎಂದರು.
ಫೆ.20 ರಂದು ಮಧ್ಯಾಹ್ನ 2 ಗಂಟೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ಹೊರೆಕಾಣಿಕೆ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ರಮಾನಂದ ಭಟ್ ಚಾಲನೆ ನೀಡಲಿದ್ದಾರೆ.
ಫೆ.22ರಂದು ಸಂಜೆ 4 ಕ್ಕೆ ವಾಮಂಜೂರು ಶ್ರೀ ರಾಮಭಜನಾಮಂದಿರದಿಂದ ಹೊರಡುವ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಕೆ.ಕೃಷ್ಣರಾಜ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜನ್ ದಾಸ್ ಕುಡುಪು, ಹೊರೆಕಾಣಿಕೆ ಸಮಿತಿಯ ಸಂಚಾಲಕ ಗಣೇಶ್ ಭಟ್, ಹೊರೆಕಾಣಿಕೆ ಸಮಿತಿಯ ಉಸ್ತುವರಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಪುಷ್ಪರಾಜ ಪೂಜಾರಿ, ಉದಯಕುಮಾರ್ ಕುಡುಪು, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಆನಂದ ಸರಿಪಳ್ಳ, ನವೀನ್ ಮೂಡುಶೆಡ್ಡೆ, ಮುಂಡಾಜೆ ಸದಾನಂದ, ಮಾಧ್ಯಮ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ,ಅನುವಂಶಿಕ ಅರ್ಚಕ ಮನೋಹರ್ ಭಟ್, ಹಾಗೂ ಪ್ರಭಾಕರ ಭಟ್ ಉಪಸ್ಥಿತರಿದ್ದರು.
