ಸುದ್ದಿ9ಮಂಗಳೂರು: ಸಿರಿ ಕ್ರಿಯೇಷನ್, ಮಂಗಳೂರು ಹಾಗೂ ಚಿತ್ರ ಸಂಗಮ, ಬೆಂಗಳೂರು ಅವರು ನೀಡುವ ಸಿರಿ ಸಿನಿಮಾ ಪ್ರಶಸ್ತಿ- 2014ಗೆ ಮಂಗಳೂರು ವಿಜಯ ಕನರ್ಾಟಕದ ಉಪಸಂಪಾದಕ ಹಾಗೂ ವರದಿಗಾರ ಸ್ಟೀವನ್ ರೇಗೊ, ದಾರಂದಕುಕ್ಕು ಆಯ್ಕೆಯಾಗಿದ್ದಾರೆ.
ಮುದ್ರಣ ಮಾಧ್ಯಮದಲ್ಲಿ ಕರಾವಳಿ ಸಿನಿಮಾ ಲೋಕದ ವಿಶೇಷ ವರದಿಗಳನ್ನು ಪರಿಗಣಿಸಿ ಸಿರಿ ಸಿನಿಮಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಸ್ಟೀವನ್ ರೇಗೊ ಅವರ ಗ್ರಾಮೀಣ ವರದಿಗಾರಿಕೆಗೆ ಈ ಹಿಂದೆ ಕಿನ್ನಿಗೋಳಿಯ ಕೆ.ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿ( ಪ.ಗೋ) ಹಾಗೂ ಮಂಗಳೂರಿನ ಮೆಗಾ ಮಿಡಿಯಾ ಪ್ರಶಸ್ತಿಗಳು ಸಂದಿದೆ. ಅವರು ಮೂಲತಃ ಪುತ್ತೂರು ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ಅವರ ಪುತ್ರ.

