ಶ್ರವಣಬೆಳಗೊಳ: ಶತಮಾನದ ಎರಡನೇ ೮೮ ನೇ ಮಸ್ತಕಾಭಿಷೇಕ ನಾಳೆ ಬೆಳಿಗ್ಗೆ ರಾಷ್ರಪತಿ ರಾಮ್ ನಾಧ್ ಕೋವಿಂದ್ ಚಾವುಂಡರಾಯ ಮಂಟಪದಲ್ಲಿ ಉದ್ಘಾಟನಾ ಮಾಡಲ್ಲಿದ್ದಾರೆ. ಫೆ.7 ರಿಂದ ಫೆ. 26 ರವರೆಗೆ ಒಟ್ಟು 20 ದಿನಗಳ ಕಾಲ ಸ್ಥಳೀಯ ಕಲಾವಿದರ ಜೊತೆಗೆ ನಾಡಿನ ದಿಗ್ಗಜರು ಹಾಗೂ ಅಂತರರಾಷ್ಟ್ರೀಯ ಕಲಾವಿದರಿಂದ ಚಾವುಂಡರಾಯ ಮಹಾವೇದಿಕೆಯಲ್ಲಿ
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಶ್ರೀ ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ 2018ರ ಪ್ರಯುಕ್ತ ಕಾಯ೯ಕ್ರಮಗಳು ಹಮ್ಮಿಕೊಂಡಿದೆ.
ಫೆ. 7 ರಂದು ಖ್ಯಾತ ಬಾಲಿವುಡ್ ಚಲನಚಿತ್ರ ಹಿನ್ನೆಲೆ ಗಾಯಕರಾದ ರೂಪೇಶ್ ಜೈನ್ ಅವರಿಂದ ಸಂಜೆ 6.30ಕ್ಕೆ ಹಿಂದಿ ಗೀತ ಗಾಯನ, ನಂತರ ಖ್ಯಾತ ಹಾಸ್ಯ ಕಲಾವಿದರಾದ ಪ್ರೊ. ಕೃಷ್ಣೇಗೌಡ ಮತ್ತು ತಂಡದ ವತಿಯಿಂದ ಹಾಸ್ಯೋತ್ಸವ, ರಾತ್ರಿ 8 ಗಂಟೆಯಿಂದ ಅಂತರಾಷ್ಟ್ರೀಯ ಖ್ಯಾತಿಯ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ತಂಡದಿಂದ ಸಂಗೀತ ರಸ ಸಂಜೆ, ಮಣಿಕಂಠ ಮತ್ತು ತಂಡದವರಿಂದ ನಾದಸ್ವರ, ಬೇಲೂರು ವೇಣುಗೋಪಾಲ್ ತಂಡದಿಂದ ಸಾಕ್ಸೋಫೋನ್, ಕು.ಚಂದನಿಲಕ್ಷ್ಮಣ್ ಮತ್ತು ತಂಡದಿಂದ ಭರತನಾಟ್ಯ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ.8 ರಂದು ಖ್ಯಾತ ಚಲನಚಿತ್ರ ನಟಿ ಹಾಗೂ ಗಾಯಕಿಯಾದ ಆಶಾ ಭಂಡಾರಿ ಅವರಿಂದ ಭರತನಾಟ್ಯ, ಬೆಂಗಳೂರು ಸಾ. ಸುಗಮ ಸಂಗೀತ ತಂಡದವರಿಂದ ಹಾಗೂ ಯುವ ಗಾಯಕ ರವಿ ಮೂರೂರು ಅವರಿಂದ ಸುಗಮ ಸಂಗೀತ, ಹಾಸನದ ಶ್ರೀ ಸಿದ್ದರಾಮೇಶ್ವರ ಕಲಾ ಸಂಘದವರಿಂದ ನಾಟಕ ದೃಶ್ಯವಳಿ, ಶ್ರೀಮತಿ ಗಾಯತ್ರಿ ಮತ್ತು ತಂಡದವರಿಂದ ವಯೋಲಿನ್ ವಾದನ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಫೆ.9 ರಂದು ಉಡುಪಿಯ ಗೌರಿಶಂಕರ್ ಸಾಂಸ್ಕøತಿಕ ಪ್ರತಿಷ್ಠಾನ ಅವರಿಂದ ಮಹಿಳಾ ಯಕ್ಷಗಾನ, ನಾಡಿನ ಖ್ಯಾತ ಯುವ ಗಾಯಕ ಮಾದಲಗೆರೆ ಅನಂದ್ರವರಿಂದ ಸುಗಮ ಸಂಗೀತ ಹಾಗೂ ಬೆಂಗಳೂರಿನ ದೇವ ನಾಗೇಶ್ ತಂಡದವರಿಂದ ನಾಟಕ.
ಫೆ.10 ನಾಡಿನ ಖ್ಯಾತ ಚಿತ್ರನಟ ಮತ್ತು ನಿದೇರ್ಶಕ ನಾಗರಾಜ್ ಕೋಟೆ ತಂಡದಿಂದ ಹಾಸ್ಯ ಸಂಭ್ರಮ ಹಾಗೂ ಅಂತರಾಷ್ಟ್ರೀಯ ಜಾದು ಕಲಾವಿದರಿಂದ ಮ್ಯಾಜಿಕ್ ಶೋ.
ಫೆ.11 ಮಂಗಳೂರಿನ ಮಹಾಗಣಪತಿ ಆರ್ಟ್ ಕಲ್ಚರಲ್ ಫೌಂಡೇಶನ್ರವರಿಂದ ಯಕ್ಷಗಾನ ಹಾಗೂ ಉಡುಪಿಯ ಭಾರ್ಗವಿ ಆಟ್ರ್ಸ್ ಮತ್ತು ಡ್ಯಾನ್ಸ್ ಅಕಾಡೆಮಿಯಿಂದ ಮಾರ್ಶಲ್ ಆಟ್ರ್ಸ್.
ಫೆ.12 ಬೆಂಗಳೂರಿನ ಅಚ್ಚಿ ಕ್ಲಾಸಿಕಲ್ ವತಿಯಿಂದ ನೃತ್ಯ ವೈಭವ ಹಾಗೂ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಇವರಿಂದ ರ್ಯಾಪ್ ಮ್ಯೂಸಿಕಲ್ ನೈಟ್
ಫೆ.13 ನವದೆಹಲಿಯ ಪಂಡಿತ ಉದಯ್ ಕುಮಾರ್ ಮಲ್ಲಿಕ್ ಹಾಗೂ ಬೆಂಗಳೂರಿನ ಕೆ.ಎಸ್. ವೈಶಾಲಿರವರಿಂದ ಹಿಂದುಸ್ತಾನ್ ಜುಗಲ್ಬಂದಿ.
ಫೆ14.ಬೆಂಗಳೂರಿನ ಜನಪದ ಗಾಯಕರಾದ ಅಪ್ಪಗೆರೆ ತಿಮ್ಮರಾಜುರವರಿಂದ ಜಾನಪದ ಗಾಯನ ಹಾಗೂ “ಜೀ” ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕರಿಂದ ಮತ್ತು ಕಾಮಿಡಿ ಕಲಾವಿದರಿಂದ ಮ್ಯೂಸಿಕ್ ನೈಟ್ ಹಾಗೂ ಹಾಸ್ಯ ಸಂಭ್ರಮ.
ಫೆ.15 ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜನಪದ ಜಾತ್ರೆ
ಫೆ.16 ಚಿಕ್ಕಮಂಗಳೂರಿನ ಮಲ್ಲಿಗೆ ಸುದೀರ್ ಮತ್ತು ತಂಡದಿಂದ ಡಾ. ಸಿ ಅಶ್ವತ್ ಗಾಯನ ಹಾಗೂ ಅಂತರಾಷ್ಟ್ರೀಯ ಗಾಯಕ ಕುನಾಲ್ ಗಾಂಜವಾಲರವರಿಂದ ಮ್ಯೂಸಿಕ್ ನೈಟ್
ಫೆ.17 ಅಂತರಾಷ್ಟ್ರೀಯ ಚಿತ್ರ ಕಲಾವಿದರಿಂದ ಫಾಸ್ಟ್ ಪೈಂಟಿಂಗ್ ಹಾಗೂ ಲೇಸರ್ ಶೋ, ಮತ್ತು ರಾಜೇಶ್ಕೃಷ್ಣನ್ ತಂಡದಿಂದ ಸಂಗೀತ ರಸಸಂಜೆ
ಫೆ.18 ಮಂಡ್ಯದ ಉರುಗಣ್ಣೇಶ್ವರಿ ಜನಪದ ಕಲಾಬಳಗದಿಂದ ಚರ್ಮವಾದ್ಯ ಮೇಳ ಮತ್ತು ಹಿನ್ನೆಲೆ ಗಾಯಕ ಹೇಮಂತ್ ತಂಡದಿಂದ ಸಂಗೀತ ರಸಸಂಜೆ
ಫೆ.19 ಅಂತರಾಷ್ಟ್ರೀಯ ಜನಪದ ಕಲಾವಿದರಿಂದ ಜನಪದ ಜೇಂಕಾರ ಹಾಗೂ ಬೆಂಗಳೂರಿನ ಸೋಲ್ ಇ ತಂಡದಿಂದ ಸಂಗೀತ ವೈವಿದ್ಯ
ಫೆ.20 ಜೀ ಟಿವಿ ಸರಿಗಮಪ ಲಿಟಲ್ ಚಾಂಪ್ ಗಾಯಕರಿಂದ ಮಕ್ಕಳ ಸಂಗಿತ ರಸಸಂಜೆ
ಫೆ.21 ಅಂತರಾಷ್ಟ್ರೀಯ ನೃತ್ಯ ಕಲಾವಿದರಿಂದ ನಾಟ್ಯ ವೈಭವ ಮತ್ತು ಭರತ ಬಾಹುಬಲಿ ಲೇಸರ್ ಶೋ ಹಾಗೂ ಹಿನ್ನೆಲೆ ಗಾಯಕಿ ಶಮಿತ ಮಲ್ನಾಡ್ ಮತ್ತು ತಂಡದಿಂದ ಸಂಗೀತ ಸಂಜೆ
ಫೆ.22 ಅಂತರಾಷ್ಟ್ರೀಯ ಸಂಗೀತ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಲೇಸರ್ ಶೋ ಹಾಗೂ ಇಂದುಶ್ರೀ ಮತ್ತು ತಂಟದಿಂದ ಡಿಂಕು ಗೊಂಬೆ ಪ್ರದರ್ಶನ
ಫೆ.23 ಖ್ಯಾತ ಚಲನಚಿತ್ರ ನಟರಾದ ಮೂಗು ಸುರೇಶ್ ಮತ್ತು ಸಾಫಲ್ಯ ರಂಗ ತಂಡದಿಂದ ಜನಪದ ಮತ್ತು ಹಾಸ್ಯ ಸಂಭ್ರಮ, ನೃತ್ಯ ರೂಪಕ, ವಯಲಿನ್ ಕಲಾವಿದ ತಂಡದಿಂದ ವಯಲಿನ್ ವಾದನ
ಫೆ.24 ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ವಿಶೇಷ ವಾದ್ಯ ಜುಗಲ್ಬಂದಿ, ರಿಮಿಕ್ಸ್ ಡ್ಯಾನ್ಸ್ ಹಾಗೂ ಹೆಜ್ಜೆನಾಧ-ಜ್ಞಾನ ಐತಾಳ್ ಮತ್ತು ತಂಡದಿಂದ ಸಂಗೀತ ನೃತ್ಯ ಸಂಜೆ
ಫೆ.25 ನಾಡಿನ ಖ್ಯಾತ ಕಲಾವಿದರಿಂದ ಸಂಗೀತ ಗಾಯಕರಿಂದ ಸುಗಮ ಸಂಗೀತ ಲೇಸರ್ ಶೋ ಹಾಗೂ ಅಂತರಾಷ್ಟ್ರೀಯ ಕಲಾವಿದರಿಂದ ವಿಕಲಚೇತನರ ಗಾಲಿ ಕುರ್ಚಿ ನೃತ್ಯ ಪದರ್ಶನ
ಫೆ.26 ಅಂತರಾಷ್ಟ್ರೀಯ ಶ್ಯಾಡೋ ಕಲಾವಿದರಿಂದ ಬೆಳಕು ನೆರಳಿನ ಆಟ ಮತ್ತು ಖ್ಯಾತ ಗಾಯಕ ಹಾಗೂ ಸಂಗೀತ ನಿದೇರ್ಶಕರಿಂದ ಸಂಗೀತ ಸಂಜೆ. ಅಂತರಾಷ್ಟ್ರೀಯ ಕಲಾವಿದರಾದ ಡಾ. ಮೈಸೂರು ಮಂಜುನಾಥ್, ಪಂಡಿತ್ ವಿಶ್ವಮೋಹನ್ ಭಟ್, ಜೈಪುರ ಮತ್ತು ತಂಡದವರಿಂದ ವೀಶೇಷ ವಯೋಲಿನ್ ಹಾಗೂ ಮೋಹನ್ ವೀಣಾರವರಿಂದ ಜುಗಲ್ ಬಂಧಿ.
ರಾತ್ರಿ ನಾಡಿನ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್ ಮತ್ತು ತಂಡದವರಿಂದ ಸಂಗೀತ ಸಂಜೆ ಏರ್ಪಡಿಸಲಾಗಿದೆ.
