ಧಾರವಾಡ: ಕೇಂದ್ರ ಸರಕಾರ ಮೋದಿ ಅವರು ಜನಾರ್ಧನರೆಡ್ಡಿ ಹಾಗೂ ಎಸ್ .ಎಂ. ಕೃಷ್ಣ ಅವರಿಗೆ ಆಶ್ರಯ ನೀಡಿ ಇಲ್ಲಿನ
ಅಕ್ರಮ ಸಂಪಾದನೆ ಮಾಡಿದವರ ರಕ್ಷಣೆ ಮಾಡುತ್ತಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಕಪ್ಪು ಹಣ ನಿಯಂತ್ರ ಮಾಡುತ್ತೇವೆ ಎಂದು ವಿನಾ ಕಾರಣ ಹೇಳಿಕೆ ನೀಡಿ ಸುಮ್ಮನಾಗುತ್ತಿದ್ದು, ಎಸ್.ಎಂ.ಕೃಷ್ಣ ಹಾಗೂ ಅವರ ಅಳಿಯ ಸಿದ್ಧಾರ್ಥ ಅವರು ತುಂಬಾ ಅಕ್ರಮ ಸಂಪಾದನೆ ಮಾಡಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಛಾಪಾ ಕಾಗದದ ಹಗರಣದ ರೂವಾರಿ ಕರಿಂಲಾಲ ತೆಲಗಿ ಯಿಂದ 1999 ರಿಂದ 2004 ರವರೆಗೆ ಎಸ್ ಎಂ ಕೃಷ್ಣ ಹಾಗೂ ಅಳಿಯ ಸಿದ್ದಾರ್ಥ ಸಾಮ್ರಾಜ್ಯ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

