ಚಿಕ್ಕಮಗಳೂರು: ಬಾಲಕನೋರ್ವ ಮೊಬೈಲ್ ಚಾರ್ಜಿಂಗ್ ವೈಯರನ್ನು ಕಚ್ಚಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಇಲ್ಲಿನ ಆಲ್ದೂರಿನಲ್ಲಿ ನಡೆದಿದೆ.
ಅಭಿಷೇಕ (4) ಮೃತಪಟ್ಟ ಬಾಲಕ ದು ಗುರುತಿಸಲಾಗಿದೆ.
ಗುರುವಾರ ಅಭಿಷೇಕ ಮನೆಯಲ್ಲಿ ಆಟವಾಡುತ್ತಿದ್ದು, ಈ ವೇಳೆ ಚಾರ್ಜಿಂಗ್ ಇಟ್ಟಿದ್ದ ವೈಯರನ್ನು ಕಚ್ಚಿದ ಪರಿಣಾಮ ವಿದ್ಯತ್ ತಗುಲಿ ಕೆಳಕ್ಕೆ ಬಿದ್ದಿದ್ದಾನೆ. ಬಳಿಕ ಪೋಷಕರು ತಕ್ಷಣ ಸ್ಥಳೀಯ ಆಸ್ಪತ್ರಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ ಅಭಿಷೇಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

