ಕಟೀಲು : ಕಟೀಲಿನ ಎಸ್ಡಿಪಿಟಿ ಹೈಯರ್ ಪ್ರೈಮರಿ ಶಾಲೆ ಮತ್ತು ಎಸ್ಡಿಪಿಟಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಜಂಟಿಯಾಗಿ ಇಂದು(ಜ. 26) ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿತು. ನಿವೃತ್ತ ಮುಖ್ಯೋಪಾಧ್ಯಾಯ ಬಾಬಣ್ಣ ಶಿವರಾಯ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಝೀ ಕನ್ನಡ ಟೀವಿಯ “ಡ್ರಾಮ ಜ್ಯೂನಿಯರ್ಸ್’ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿರುವ ಎಸ್ಡಿಪಿಟಿ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ವೀಕ್ಷಾಳಿಗೆ ಕಟೀಲು ಎಸ್ಡಿಪಿಟಿ ದೇವಸ್ಥಾನದಿಂದ ಸೀರೆ, ನಗದು ಹಾಗೂ ಹಣ್ಣುಹಂಪಲು ನೀಡಿ ಸನ್ಮಾನಿಸಲಾಯಿತು.
ಕೊಡುಗೈ ದಾನಿ ಹರಿಪ್ರಸಾದ್ ಅವರು ಕು. ವೀಕ್ಷಾ ಹಾಗೂ ಎಸ್ಡಿಪಿಟಿ ಹೈಯರ್ ಪ್ರೈಮರಿ ಶಾಲೆಯ ಕುಮಾರಿ ಶ್ರೇಯಾಳಿಗೆ ಬೆಳ್ಳಿಯ ಸರ ಕೊಡುಗೆ ನೀಡಿದರು. ಕು. ಶ್ರೇಯಾ ಛತ್ತೀಸ್ಗಢದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದಳು.
