ಉಡುಪಿ: ಜೆಸಿಐ ಉಡುಪಿ ಸಿಟಿ ಇದರ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಇತ್ತೀಚೆಗೆ ನಗರದ ಬಡಗುಬೆಟ್ಟು ಸೋಸೈಟಿಯ ಜಗನ್ನಾಥ ಸಭಾ ಭವನದಲ್ಲಿ ನಡೆಯಿತು.
ಈ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಿಜೆಪಿ ಮಂಗಳೂರು ಪ್ರಭಾರಿ ಹಾಗೂ ಉದ್ಯಮಿ ಉದಯ ಕುಮಾರ್ ಶೆಟ್ಟಿ ಕಿದಿಯೂರು, ವ್ಯಕ್ತಿತ್ವ ವಿಕಸನದ ಮೂಲಕ ದೇಶದಲ್ಲಿ ಯುವಕರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಜೆಸಿ ಸಂಸ್ಥೆಯು ನಾಯಕತ್ವದ ಸಂಕೇತ ಎಂದರು.
ಬಡಗುಬೆಟ್ಟು ಕೋ.ಅ. ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಯುವಜನಾಂಗಕ್ಕೆಇಂದು ಸರಿಯಾದ ಮಾರ್ಗದರ್ಶನ ದೊರೆತರೆ ದೇಶದ ದಿಕ್ಕನೇ ಬದಲಾಯಿಸಬಹುದು ಎಂದು ಅಭಿಪ್ರಾಯಪಟ್ಟರು.
ವಲಯಾಧ್ಯಕ್ಷ ರಾಕೇಶ್ ಕುಂಜೂರು ಸಂಸ್ಥೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಬಳಿಕ ಜೆಸಿಐ ನೂತನ ಅಧ್ಯಕ್ಷರಾಗಿ ರಫೀಕ್ ಖಾನ್ ಅಧಿಕಾರ ವಹಿಸಿಕೋಮಡರು.
ಸಭೆಯಲ್ಲಿ ಪದ ಪ್ರದಾನ ಅಧಿಕಾರಿ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭುಕರ್ವಾಲು, ಕಾರ್ಯದರ್ಶಿ ಜಗದೀಶ್ ಶೆಟ್ಟಿ ಕೀಳಂಜೆ, ಯುವ ಜೇಸಿ ಅಧ್ಯಕ್ಷ ಫೈಸಲ್ ಖಾನ್, ಅಕ್ಷತಾ ಕೆ.ಎ, ಸುಭಾಷ್ ಕುಮಾರ್, ನಿಕಟಪೂರ್ವ ವಲಯಾಧ್ಯಕ್ಷ ಸಂತೋಷ್ ಜಿ.ಪೂರ್ವ ವಲಯಾದ್ಯಕ್ಷ ಸಂದೀಪ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

