ಗಾಂಧಿನಗರ: ವ್ಯಕ್ತಿಯೋರ್ವ ಮೂರು ಹಸುಗಳ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದ ಪರಿಣಾಮ ಒಂದು ಹಸು ಸಾವನ್ನಪ್ಪಿರುವ ಹೀನ ಘಟನೆ ಗುಜರಾತ್‍ನ ವಡೋದರಾದ ವರ್ನಾಮಾ ಗ್ರಾಮದಲ್ಲಿ ನಡೆದಿದೆ.
ರಥೋಡಿಯಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ತನ್ನ ಮನೆ ಗೆಲಸನಾಗಿದ್ದ ಆರೋಪಿ ರಥೋಡಿಯಾ ಭಾನುವಾರ ಹಾಗೂ ಸೋಮವಾರದ ಮಧ್ಯರಾತ್ರಿ ಮೂರು ಹಸುಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದು, ಸೋಮವಾರ ಬೆಳಗ್ಗೆ ಹಸುಗಳ ಕೊಟ್ಟಿಗೆಗೆ ಬಂದು ನೋಡಿದಾಗ ಮೂರು ಹಸುಗಳ ಕಾಲುಗಳನ್ನು ಕಟ್ಟಲಾಗಿತ್ತು. ನಾಲ್ಕನೇ ಹಸು ಸಾವನ್ನಪ್ಪಿತ್ತು. ಈ ಹಿಂದೆ ಇದೇ ಆರೋಪಿ ಎರಡು ವರ್ಷಗಳ ಹಿಂದೆ ಕರುವಿನ ಮೇಲೆ ಇದೇ ರೀತಿಯ ಕೃತ್ಯವೆಸಗಿದ್ದ ಎಂದು ಮನೆ ಮಾಲಕ ಲಾಲ್‍ಜಿ ರಾಬಾರಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ರಥೋಡಿಯಾ ವಿರುದ್ಧ ವರ್ನಾಮಾ ಪೊಲೀಸರು ಪ್ರಾಣಿಗಳ ಕೌರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

