ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ ನಗರದ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲತಃ ಕುಂದಾಪುರ ತಾಲೂಕಿನ ಕೋಟೇಶ್ವರದವರಾಗಿದ್ದ ಕಾಶಿನಾಥ್ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿನ್ನ ಲೆ ಅವರನ್ನು 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
1975 ರಲ್ಲಿ ಅಪರೂಪದ ಅತಿಥಿ ಚಿತ್ರವನ್ನು ನಿರ್ದೇಶಿಸಿ ಹೊಸತನವನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟರು. ರಿಯಲ್ ಸ್ಟಾರ್ ಉಪೇಂದ್ರ,ಸಂಗೀತ ನಿರ್ದೇಶಕ ವಿ.ಮನೋಹರ್ , ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಅನೇಕ ದಿಗ್ಗಜರು ಕಾಶಿನಾಥ್ ಅವರ ಶಿಷ್ಯರಾಗಿದ್ದಾರೆ.
ಕಾಶಿನಾಥ್ ಅವರು ಪುತ್ರ ನಟ ಅಲೋಕ್ ಕಾಶಿನಾಥ್ ಮತ್ತು ಪುತ್ರಿ ಅಮೃತವರ್ಷಿಣಿ ಅವರನ್ನು ಅಗಲಿದ್ದಾರೆ.

