ಬಂಟ್ವಾಳ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸುವ ಸಾಮಥ್ರ್ಯ ಪೋಷಕರಲ್ಲಿರಬೇಕು.ಮಕ್ಕಳಲ್ಲಿ ಕಲಾಪ್ರಕಾರಗಳ ಮೇಲಿನ ಆಸಕ್ತಿಯನ್ನು ಬೆಳೆಸುವ ಕಾರ್ಯ ಮಾಡಬೇಕು. ನಿಷ್ಕಲ್ಮಶವಾದ ಮಕ್ಕಳ ಮನಸ್ಸನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಲು ಪ್ರೋತ್ಸಾಹಿಸಿ ಸೃಜನಶೀಲತೆಯನ್ನು ವೃದ್ಧಿಸಬೇಕು.ಆದರಿಂದ ಮಕ್ಕಳ ಪ್ರತಿಭೆ ವಿಕಸನಗೊಳ್ಳುವುದು ಎಂದು ಜಿಲ್ಲಾ ಹಿರಿಯ ಮಲೇರಿಯ ಪರಿವೀಕ್ಷಕ ಜಯರಾಮ ಪೂಜಾರಿ ಹೇಳಿದರು.

ಅವರು ಶನಿವಾರ ರಾತ್ರಿ ಬಂಟ್ವಾಳ ತಾ| ಕೊಯಿಲ ಅಣ್ಣಳಿಕೆ ಫ್ರೆಂಡ್ಸ್ ಬಳಗ ಇದರ ಆಶ್ರಯದಲ್ಲಿ ಲೊರೆಟ್ಟೊಹಿಲ್ ರೋಟರಿಕ್ಲಬ್ ಸಹಯೋಗದಲ್ಲಿ ವಿಘ್ನೇಶ್ವರ ಕಲಾವೇದಿಕೆಯಲ್ಲಿ ಜರಗಿದ 11ನೇ ವರ್ಷದ ಪ್ರತಿಭಾನ್ವೇಷಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘ ಸಂಸ್ಥೆಗಳು ಕಲೆಯನ್ನು ಪೆÇೀಷಿಸುವ ಕಾರ್ಯ ಮಾಡಿದಾಗ ಸಾಮಾಜಿಕ ಸಾಮರಸ್ಯದ ಮಾನವ ಪ್ರೇಮ ಅರಳುತ್ತದೆ. ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

1401pkt1
ಬಿ.ಸಿ. ರೋಡ್ ನ್ಯಾಯವಾದಿ ಆಶಾ ಪ್ರಸಾದ್‍ರೈ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳಿಗೆ ಓದುವಿಕೆಯನ್ನೇ ಗುರಿಯಾಗಿಸದೆ ಕಲೆ, ಸಾಹಿತ್ಯದ ಜತೆ ಉತ್ತಮ ಸಂಸ್ಕಾರ ನೀಡುವುದು ಹಿರಿಯರ ಕರ್ತವ್ಯ. ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳನ್ನು ಜಗತ್ತಿಗೆ ನೀಡಿದ ಪ್ರತಿಭೆಗಳ ದೇಶ ನಮ್ಮದು ಸಮಾಜ ಶ್ರೇಷ್ಠ ವಿಚಾರಗಳಿಂದ ಸದೃಢ ದೇಶ ಕಟ್ಟುವ ಕಾರ್ಯ ಆಗಬೇಕು ಎಂದು ಹೇಳಿದರು.
ಲೊರೆಟ್ಟೊಹಿಲ್ ರೋಟರಿ ಕ್ಲಬ್ ಅಧ್ಯಕ್ಷ ಅವಿಲ್ ಮಿನೇಜಸ್ ಮಾತನಾಡಿ ಕಲೆಗೆ ಅಗಾಧವಾದ ಶಕ್ತಿ ಇದ್ದು ಕಲೋಪಾಸನೆ, ಕಲಾ ಪೆÇ್ರೀತ್ಸಾಹ ನಿರಂತರವಾಗಿ ನಡೆಯಲಿ ಎಂದು ಹೇಳಿದರು. ಕೊಯಿಲ ಸರಕಾರಿ ಪ್ರೌಢಶಾಲಾ ಶಿಕ್ಷಕ ರಮೇಶ್ ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫ್ರೆಂಡ್ಸ್ ಬಳಗದ ಸುಮಾ ನಾಗರಾಜ್, ಸುಮಿತ್ರಾ ಆರ್. ಶೆಟ್ಟಿಗಾರ್,ರಾಧಾಕೃಷ್ಣ ಆಚಾರ್ಯ, ಶಶಿಧರ ಆಚಾರ್ಯ, ಮಾಧವ ಅಣ್ಣಳಿಕೆ, ಸುರೇಶ್‍ಅಣ್ಣಳಿಕೆ, ಸುಜಾತಾ, ಅಂಕಿತಾ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ವಾಸ್ತು ಶಿಲ್ಪ ತಜ್ಞ ಮೋನಪ್ಪ ಆಚಾರ್ಯ ಬÉೈದಗುತ್ತು ಅವರನ್ನು ಸಮ್ಮಾನಿಸಲಾಯಿತು. ಕೊಯಿಲ ಹಿ.ಪ್ರಾ.ಶಾಲೆಯ 5ರಿಂದ 7ನೇ ತರಗತಿ ಮತ್ತು ಪ್ರೌಢಶಾಲಾ 10ನೇ ತರಗತಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿದರು. ಫ್ರೆಂಡ್ಸ್ ಬಳಗ ಸಂಚಾಲಕ ರಾಮಚಂದ್ರ ಶೆಟ್ಟಿಗಾರ್ ಅವರು ಪ್ರಸ್ತಾವಿಸಿದರು. ಚಂದ್ರಹಾಸ ಬಂಟ್ವಾಳ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *