20180107_145213

ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆ ತಯಾರಿಗೆ ಪೂರಕವಾಗಿ ಉಡುಪಿ ಕ್ಷೇತ್ರದ ಸುಮಾರು 2000 ಯುವ ಕಾರ್ಯಕರ್ತರನ್ನು ಸೇರಿಸಿ ನವಶಕ್ತಿ ಸಮಾವೇಶ ಜಿಲ್ಲೆಯಲ್ಲಿ ಆಯೋಜಿಸಲಾಗುವುದು ಎಂದು ಮಂಗಳೂರು ಸಂಸದ ಮತ್ತು ಉಡುಪಿ ವಿಧಾನಸಭಾ ಚುನಾವಣಾ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.

ಮಂಗಳವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಸಶಕ್ತೀಕರಣ ಪ್ರಭಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯ 213 ಕ್ಷೇತ್ರಗಳ ಪ್ರತೀ ಬೂತ್ ನಲ್ಲಿ 9 ವಿವಿಧ ಪ್ರವೃತ್ತಿಗಳನ್ನು ಪ್ರತಿನಿಧಿಸುವ ಕಾರ್ಯಕರ್ತರ ತಂಡದ ನವಶಕ್ತಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಪ್ರತಿಯೊಂದು ಶಕ್ತಿಕೇಂದ್ರದಲ್ಲಿಯೂ ಮಹಾ ನವಶಕ್ತಿ ಕೇಂದ್ರವನ್ನು ಸಂಘಟಿಸಿ ಈ ಸಮಾವೇಶದ ತಯಾರಿ ನಡೆಸಲಾಗುವುದು ಎಂದರು.

ಮೊಬೈಲ್ ನಲ್ಲಿ ಮಿಸ್ ಕಾಲ್ ನೀಡಿ ಪಕ್ಷದ ಸದಸ್ಯರಾದವರ ನೋಂದಣಿ ಪ್ರಕ್ರಿಯೆಗಳನ್ನು ಕೂಡಲೇ ಪೂರ್ಣಗೊಳಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಪ್ರಧಾನಿ ಕಾರ್ಯಾಲಯದಿಂದ ಸದಸ್ಯರಿಗೆ ನೇರವಾಗಿ ಸಂಪರ್ಕ ಏರ್ಪಡಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.

ಮೇ ತಿಂಗಳಲ್ಲಿ 5 ಫ್ಲೈಓವರ್ ಗಳ  ಕಾಮಗಾರಿ ಪೂರ್ಣ: ಮಂಗಳೂರು ಮಹಾವೀರ ವೃತ್ತದಿಂದ ಬೈಂದೂರು ನಡುವಿನ ಉಡುಪಿಯ ಕರಾವಳಿ ಜಂಕ್ಷನ್ ಸೇರಿ 55 ಹೆದ್ದಾರಿ ಫ್ಲೈ ಓವರ್ ಗಳ ಕಾಮಗಾರಿ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ರಘುಪತಿ ಭಟ್, ದ.ಕ. ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಜಿ.ಪಂ ಅಧ್ಯಕ್ಷ ದಿನಕರ್ ಬಾಬು, ಉಡುಪಿ ನಗರಾಧ್ಯಕ್ಷ ಪ್ರಭಾಕರ್ ಪೂಜಾರಿ, ಗ್ರಾಮಾಂತರ ಅಧ್ಯಕ್ಷ ಮಾರಾಳಿ ಪ್ರತಾಪ್ ಹೆಗ್ಡೆ, ರಾಜ್ಯ ಕಾರ್ಯಕಾರಿಣಿಗಳಾದ ಉದಯಕುಮಾರ್ ಶೆಟ್ಟಿ, ಶಾಮಲಾ ಕುಂದರ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ರಶ್ಮಿತಾ ಬಾಲಕೃಷ್ಣ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರಜನಿ ಹೆಬ್ಬಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ ನಾಯಕ್ ಹಾಗೂ ಸಂದ್ಯಾ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಮತ್ತು ಕಮಲಾಕ್ಷ ಹೆಬ್ಬಾರ್  ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *