ಗುರುಪುರ-ಕೈಂಕಬ: ಗುರುಪುರ ಹಾಗೂ ಗಂಜಿಮಠ ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಮತ್ತು ಬಾಮಿ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಿಂದ ಇಲ್ಲಿನ ಗುರುಪುರ ಗ್ರಾ.ಪಂ. ವಠಾರದಲ್ಲಿ ಆಯೋಜಿಸಿದ್ದ “ನಮ್ಮ ತ್ಯಾಜ್ಯ ನಮ್ಮ ಹೊಣೆ” ಸ್ವಚ್ಛತಾ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಜಿ.ಪಂ. ಸದಸ್ಯ ಯು.ಪಿ.ಇಬ್ರಾಹೀಂ ಶನಿವಾರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ಸಚಿನ್ ಅಡಪ, ಗ್ರಾ.ಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ.ಎಂ ಉದಯ ಭಟ್, ಸದಸ್ಯರಾದ ಯಶವಂತ ಶೆಟ್ಟಿ, ದಾವೂದ್, ಎ.ಕೆ ಮೊಹಮ್ಮದ್, ಉಮೈಬಾನು, ಜಯಲಕ್ಷ್ಮಿ, ಗಂಜಿಮಠ ಗ್ರಾ.ಪಂ ಪಿಡಿಒ ಜಗದೀಶ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಳಿಕ ಪೊಳಲಿ ದ್ವಾರದಿಂದ ಕೈಕಂಬ ಜಂಕ್ಷನ್ ವರೆಗೆ ಕಾಲ್ನಡಿ ಜಾಥಾ ನಡೆಯಿತು.



