ಕೈಕಂಬ : ಇಲ್ಲಿನ ಗುರುಪುರ ಫಲ್ಗುಣಿ ನದಿಯ ಸೇತುವೆ ಬಳಿ ನೀರಿನಲ್ಲಿ ಇಂದು ಬೆಳಿಗ್ಗೆ ಬಾಲಕಿಯೊಬ್ಬಳ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಾಕೆ ಸ್ಥಳೀಯ ಉಳಾಯಿಬೆಟ್ಟಿನ ನಿವಾಸಿ ದಿ. ಸೂರಜ್ ಶಶಿಕಲಾ ಎಂಬವರ ಮಗಳು ತನುಶ್ರೀ(17) ಎಂದು ಗೊತ್ತಾಗಿದೆ.6vp thanusri

ಈಕೆ ಗುರುಪುರ ಕೈಕಂಬದ ರೋಸಾ ಮಿಸ್ತಿಕ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದಳು. ಇಂದು ಮುಂಜಾನೆ ಬೆಳಗ್ಗೆ ಬೇಗನೆ ಎದ್ದು ಹೋಗಿದ್ದಾಳೆ  ಈಕೆಗಾಗಿ ಮನೆಯವರು ಹುಡುಕಾಟ ನಡೆಸಿದಾಗ ಗುರುಪುರ ನದಿಯಲ್ಲಿ ಶವವೊಂದು ತೇಲುತ್ತಿರುವುದು ಕಂಡು ಬಂದಿದ್ದು, ಪರಿಶೀಲಿಸಿದಾಗ ತುನುಶ್ರೀ ಎಂದು ಗೊತ್ತಾಗಿದೆ. ಆತ್ಮಹತ್ಯೆಗೆ ನಿಖರ ಕಾರಣಗಳು ಗೊತ್ತಾಗಿಲ್ಲವಾದರೂ, ಕೆಲವು ಸಮಯದಿಂದ ಈಕೆ ಯಾರೊಂದಿಗೋ ಪ್ರೀತಿ ಮಾಡುತ್ತಿರುವ ವಿಷಯ ಮನೆಯವರಿಗೆ ಮೊನ್ನೆಯಷ್ಟೇ ತಿಳಿದು ಬಂದಿದ್ದು, ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿ, ಮೊಬೈಲ್ ಕಸಿದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆ ಮುಂದುವರಿದಿದೆ.

By suddi9

Leave a Reply

Your email address will not be published. Required fields are marked *