ಅಡ್ಡೂರು: ಎಸ್ಕೆಎಸ್ಸೆಸೆಫ್ ಟಿಬೆಟ್ ಯೂನಿಟ್ ವತಿಯಿಂದ ‘ಮಜ್ಲಿಸುನ್ನೂರು ವಾರ್ಷಿಕೋತ್ಸವ ಹಾಗೂ 2 ದಿವಸಗಳ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ’ ಜ.4ರಿಂದ ಇಲ್ಲಿನ ಟಿಬೆಟ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ.
ಜ.4ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಮುಶಾವರ ಉಪಾಧ್ಯಕ್ಷ ಅಲ್ ಹಾಜ್ ಅಬ್ದುಲ್ ಜಬ್ಬಾರ್ ಮಿತ್ತಬೈಲ್ ನೆರವೇರಿಸಲಿದ್ದು, ಅಡ್ಡೂರು ಮುದರ್ರಿಸ್ ಶರೀಫ್ ದಾರಿಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಎಸ್ಕೆಎಸ್ಸೆಸೆಫ್ ಟಿಬೆಟ್ ಯೂನಿಟ್ ಅಧ್ಯಕ್ಷ ಅಬ್ದುಲ್ ಬಶೀರ್ ಸಾಗರ್ ಹಾಗೂ ಉಪಾಧ್ಯಕ್ಷ ಅಹ್ಮದ್ ಬಾವಾ ಟಿಬೆಟ್ ಉಪಸ್ಥಿತರಿರುವರು. ಮುಖ್ಯ ಭಾಷಣಕಾರರಾಗಿ ಅನ್ವರಲಿ ಹುದವಿ ಕೇರಳ ಭಾಗವಹಿಸಲಿದ್ದಾರೆ.
ಜ.5ರಂದು ನಡೆಯುವ ಕಾರ್ಯಕ್ರಮವನ್ನು ಅಡ್ಡೂರು ಮುದರ್ರಿಸ್ ಶರೀಫ್ ದಾರಿಮಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಬಿಜೆಎಂ ಅಧ್ಯಕ್ಷ ಟಿ.ಸೈಯದ್ ತೋಕೂರು ವಹಿಸಲಿದ್ದಾರೆ. ಅದ್ಭುತ ಬಾಲಕ ಹಾಫಿಳ್ ಉಕ್ಕಾಸ್ ಉನ್ಯಾಸಕ ನೀಡಲಿದ್ದು, ಮುಖ್ಯ ಅಥಿತಿಗಳಾಗಿ ಯೂಸುಫ್ ಅಡ್ಡೂರು, ಅಡ್ಡೂರು ಅಲ್ ಮದ್ರಸುತುಲ್ ಬದ್ರಿಯಾ ಸದರ್ ಮುಅಲ್ಲಿಂ ಮೊಹಮ್ಮದ್ ಮುಸ್ತಫಾ ಹನೀಫೀ ಉಪಸ್ಥಿತರಿರುವರು.
ಅಡ್ಡೂರು ಬಿಜೆಎಂ ಗೌರವಾಧ್ಯಕ್ಷ ಹಾಜಿ. ಎ.ಎಸ್. ಬಾವುಞಿ, ಶಾಸಕ ಮೊಯಿದ್ದೀನ್ ಬಾವಾ, ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ ಮತ್ತಿತರರು ಗಣ್ರು ಭಾಗವಹಿಸಲಿದ್ದಾರೆ.
ಇದೇ ವೇಳೇ ದ.ಕ.ಜಿಲ್ಲಾ ವಕ್ಫ್ ಸಲಹ ಸಮಿತಿ ಉಪಾಧ್ಯಕ್ಷ ಹಾಜಿ ಶಾಹುಲ್ ಹಮೀದ್ ಗುರುಪುರ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

