ಸುದ್ದಿ9ಬಂಟ್ವಾಳ: ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಬಂಟ್ವಾಳ ಇದರ ವತಿಯಿಂದ ಆಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ಬೈಪಾಸ್ ಬಳಿ ಶ್ರೀರಾಮ ಮಂದಿರದ ವಠಾರದಲ್ಲಿ ದ್ವಿಚಕ್ರ ವಾಹನಜಾಥಾವನ್ನು ಸಮಾಜ ಸೇವಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಉದ್ಘಾಟಿಸಿದರು ಮುಖ್ಯ ಅತಿಥಿಯಾಗಿ ಜಿ.ಆನಂದ ಬಂಟ್ವಾಳ, ಅಶೋಕ್ ಶೆಟ್ಟಿ ಸರಪಾಡಿ, ಗುರುರಾಜ್ ಬಂಟ್ವಾಳ, ಸುರೇಶ್ ಬೆಂಜನಪದವು, ಭುವಿತ್ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಬಂಟ್ವಾಳ ಕೆಳಗಿನಪೇಟೆ ಪಾಣೆಮಂಗಳೂರು ಪೇಟೆಯಾಗಿ ಕಲ್ಲಡ್ಕ ಅಲ್ಲಿಂದ ರಾಷ್ಟೀಯ ಹೆದ್ದಾರಿ ಮೂಲಕ ಬಿ.ಸಿ.ರೋಡ್ ಮೂಲಕ ತಾಲೂಕು ಕಚೇರಿ ಮುಂಬಾಗದಲ್ಲಿ ಸಮಾಪ್ತಿಗೊಂಡಿತು.


