(ಆ.15.) ರಂದು ಭಾರತದ ಸ್ವಾತಂತ್ರ್ಯ ದಿನವಾಗಿದೆ. ಈ ಪ್ರಯುಕ್ತ ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರಪ್ರೇಮವನ್ನು ಜಾಗೃತ ಗೊಳಿಸುವಂತಹ ಕೃತಿ ಹಾಗೂ ನಾವಿರುವ ಪ್ರಜಾಪ್ರಭುತ್ವದಲ್ಲಿ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುವ ಮಾಡಬೇಕಾಗಿರುವ ಬೇಡಿಕೆಗಳನ್ನು ಈ ಲೇಖನದಲ್ಲಿ ಮಂಡಿಸಲಾಗಿದೆ. ಈ ರೀತಿಯ ಕೃತಿ ಮಾಡುವುದರಿಂದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ. ಆಗಲೇ ನಾವು ನಿಜವಾದ ಅರ್ಥದಲ್ಲಿ ಕ್ರಾಂತಿಕಾರರು ದೇಶಕ್ಕಾಗಿ, ಪರ್ಯಾಯವಾಗಿ ನಮಗಾಗಿ ಮಾಡಿದ ಬಲಿದಾನದ ಋಣವನ್ನು ತೀರಿಸಬಹುದು.

ವಿದ್ಯಾರ್ಥಿ ಮಿತ್ರರೇ, ನಾವು ಪೌರನೀತಿಯಲ್ಲಿ ಪ್ರಜಾಪ್ರಭುತ್ವದ ವಾಖ್ಯೆಯನ್ನು ಕಲಿತುಕೊಂಡಿದ್ದೇವೆ. ಪ್ರಜೆಗಳು ಪ್ರಜೆಗಳ ಕಲ್ಯಾಣಕ್ಕಾಗಿ ನಡೆಸುವ ರಾಜ್ಯವೆಂದರೆ ಪ್ರಜಾಪ್ರಭುತ್ವ, ಅಂದರೆ ಪ್ರಜಾತಂತ್ರ. ಆದರೆ ಮಿತ್ರರೇ, ಇಂದು ನಿಜವಾದ ಅರ್ಥದಲ್ಲಿ ಪ್ರಜೆಗಳ ರಾಜ್ಯವಿದೆಯೇ ? ಇಲ್ಲ ತಾನೆ ? ಸ್ವಾತಂತ್ರ್ಯದಿನದ ಪ್ರಯುಕ್ತ ಈ ಹಿಂದಿನ ಕಾರಣಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ.
1.`ರಾಷ್ಟ್ರಾಭಿಮಾನದ ಅಭಾವ’ವೇ ದೇಶದ ಎಲ್ಲ ಸಮಸ್ಯೆಗಳ ಹಿಂದಿನ ಕಾರಣ
ಇಂದು ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ದೇಶದಲ್ಲಿ ಭ್ರಷ್ಟಾಚಾರವು ಹಾಹಾಕಾರವೆಬ್ಬಿಸಿದೆ. ದೇಶದ ಗಡಿಗಳು ಕೂಡ ಸುರಕ್ಷಿತವಾಗಿಲ್ಲ. ದೇಶದ ಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮೆಲ್ಲರ ಅಸ್ತಿತ್ವಕ್ಕೂ ಧಕ್ಕೆಯುಂಟಾಗುವುದು. ಇದಕ್ಕಾಗಿ ನಾವು ದೇಶದ ಭಾವೀ ಪ್ರಜೆಗಳು ಎಂಬ ಸಂಬಂಧದಿಂದ ಈ ವಿಷಯದ ಬಗ್ಗೆ ಗಂಭೀರ ವಾದ ವಿಚಾರ ಮಾಡಿ ಪರಿಹಾರವನ್ನು ಹುಡುಕಬೇಕಾಗಿದೆ, ಆಗಲೇ ನಾಳಿನ ಭಾರತವು ಆದರ್ಶ ಹಾಗೂ ಸುಜಲಾಂ-ಸುಫಲಾಂ ಆಗುತ್ತದೆ.
ಮಿತ್ರರೇ ನಮ್ಮೆಲ್ಲರಲ್ಲಿರುವ ರಾಷ್ಟ್ರಾಭಿಮಾನದ ಅಭಾವವೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ನನಗೆ ಅನಿಸುತ್ತದೆ. `ನಾನು ಮಾಡುವ ಪ್ರತಿಯೊಂದು ಕೃತಿಯನ್ನು ನನ್ನಲ್ಲಿ ಹಾಗೂ ಇತರರಲ್ಲಿ ರಾಷ್ಟ್ರಾಭಿಮಾನ ಜಾಗೃತ ವಾಗುವಂತೆಯೇ ಮಾಡುವೆನು’ ಎಂದು ನಾವು ಇಂದಿನಿಂದ ನಿರ್ಧರಿಸಬೇಕಾಗಿದೆ.
2. ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಸಲುವಾಗಿ ಮಾಡಬೇಕಾಗಿರುವ ಕೃತಿಗಳು
ವಿದ್ಯಾರ್ಥಿ ಮಿತ್ರರೇ ಇಂತಹ ಪರಿಸ್ಥಿತಿ ಯನ್ನು ಬದಲಾಯಿಸುವ ಸಲುವಾಗಿ ಕೆಳಗೆ ನೀಡಿದಂತೆ ಕೃತಿ ಮಾಡಲು ಈ ದಿನದಿಂದ ನಿರ್ಧರಿಸೋಣ.
1.ಧ್ವಜದ ಅಪಮಾನವನ್ನು ತಡೆಯುವುದು
2. ಕ್ರಾಂತಿಕಾರರ ಚರಿತ್ರೆಯ ಅಧ್ಯಯನ ಮಾಡಿ ಅವರ ಮೌಲ್ಯಗಳನ್ನು ಕೃತಿಯಲ್ಲಿ ತರುವುದು
3. ದೇಶಭಕ್ತಿ ಹಾಡುಗಳನ್ನು ಕಂಠಪಾಠ ಮಾಡುವುದು ಹಾಗೂ ಅದನ್ನು ಸಮೂಹದಲ್ಲಿ ಹಾಡುವುದು
4. ಕ್ರಾಂತಿಕಾರರ ಘೋಷವಾಕ್ಯಗಳನ್ನು ಹಾಗೂ ಅವರ ಚಿತ್ರಗಳನ್ನು ಮನೆಯಲ್ಲಿ ಹಾಕುವುದು
5.ನಮಗೆ ಆದರ್ಶವೆಂದು ಯಾವುದಾ ದರೊಬ್ಬ ಕ್ರಾಂತಿಕಾರರನ್ನು ಆರಿಸುವುದು
6.ಸ್ನೇಹಿತರ ಜನ್ಮದಿನದಂದು ಕ್ರಾಂತಿ ಕಾರರ ಚಿತ್ರ ಅಥವಾ ಅವರ ಬಗ್ಗೆ ಮಾಹಿತಿ ನೀಡುವ ಸಣ್ಣ ಪುಸ್ತಕಗಳನ್ನು ಉಡುಗೊರೆ ಯಾಗಿ ನೀಡುವುದು
7.ತಮ್ಮ ಶಾಲೆಗಳಲ್ಲಿ ಸಂಪೂರ್ಣ `ವಂದೇ ಮಾತರಂ’ಅನ್ನು ಹೇಳಲು ಒತ್ತಾಯ ಮಾಡುವುದು
8.ರಾಷ್ಟ್ರಗೀತೆಯ ಅಪಮಾನವಾಗು ತ್ತಿದ್ದರೆ ಅದನ್ನು ತಡೆಯುವುದು
9.ಕ್ರಾಂತಿಕಾರರ ಜೀವನದ ಮೇಲಾಧ ರಿಸಿದ ಚರ್ಚಾ ಕೂಟಗಳನ್ನು ಆಯೋಜಿಸುವುದು
10.ಪ್ರತಿಜ್ಞೆಯಂತೆ ನಡೆದುಕೊಳ್ಳುವುದು
11.ಕ್ರಾಂತಿಕಾರರ ಹಾಗೂ ದೇಶಭಕ್ತರ ಚಿತ್ರಗಳ ಪ್ರದರ್ಶನವನ್ನು ಆಯೋಜಿಸುವುದು
12.ಕ್ರಾಂತಿಕಾರರ ಚಿತ್ರಗಳಿಗೆ ಬಣ್ಣ ಹಚ್ಚುವ ಸ್ಪರ್ಧೆಯನ್ನು ಆಯೋಜಿಸುವುದು
13.ದೇಶಭಕ್ತಿಯನ್ನು ಮೂಡಿಸು ವಂತಹ ಚಲನಚಿತ್ರ ಹಾಗೂ ಧಾರಾವಾಹಿ ಗಳನ್ನು ನೋಡುವುದು
ಸ್ನೇಹಿತರೇ, ನಾವು ಮೇಲೆ ನೀಡಿರು ವಂತಹ ಪ್ರತಿಯೊಂದು ಅಂಶಗಳನ್ನೂ ಆಚರಿಸಿ ದಾಗ ಅದು ನಿಜವಾದ ಪ್ರಜಾಪ್ರಭುತ್ವ ವಾಗಿರುತ್ತದೆ. ನಾವು ಪ್ರತಿಯೊಂದು ಅಂಶ ಗಳನ್ನು ಕೃತಿಯಲ್ಲಿ ತರೋಣ ಹಾಗೂ ನಮ್ಮ ಮಿತ್ರರಿಗೂ ಹಾಗೆ ಮಾಡಲು ಆಗ್ರಹಿಸೋಣ.
4.ರಾಷ್ಟ್ರಪ್ರೇಮ ಜಾಗೃತಗೊಳಿಸುವ ಸಲುವಾಗಿ ಹಾಗೂ ಆದರ್ಶ ಪ್ರಜಾಪ್ರಭುತ್ವ ರಾಜ್ಯ ತರಲು ಮಾಡಬೇಕಾದ ಕೆಲವು ಬೇಡಿಕೆಗಳು
ಪ್ರಜಾಪ್ರಭುತ್ವ ದಿನದ ನಿಮಿತ್ತವಾಗಿ ನಾವು ಓರ್ವ ವಿದ್ಯಾರ್ಥಿ ಎಂದು ಕೆಲವು ಬೇಡಿಕೆಗಳನ್ನು ಮಾಡೋಣ. ಈ ಬೇಡಿಕೆ ಗಳೇನಾದರೂ ಈಗಿನ ರಾಜಕಾರಣಿಗಳು ಸ್ವೀಕರಿಸಿದರೆ, ಆಗ ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಜಾಗೃತಗೊಳ್ಳುತ್ತದೆ ಹಾಗೂ ಶೀಘ್ರವಾಗಿ ಆದರ್ಶ ಪ್ರಜಾಪ್ರಭುತ್ವ ರಾಜ್ಯ ಬರುವುದು. ಈ ಬೇಡಿಕೆಗಳಂತೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯಾಗಲಿ, ಎಂಬುದೇ ಭಗವಂತನ ಚರಣಗಳಲ್ಲಿ ಪ್ರಾರ್ಥನೆ!
ಅ. ಸ್ವಾತಂತ್ರ್ಯ ದಿನದಂದು ಆಗುವ ರಾಷ್ಟ್ರಧ್ವಜದ ವಿಡಂಬನೆಯನ್ನು ತಡೆಯಿರಿ.
ಆ. ರಾಷ್ಟ್ರೀಯ ಶಿಕ್ಷಣದಲ್ಲಿ ಸಮಾನತೆ ಯಿರಬೇಕು. ಅಂತರರಾಷ್ಟ್ರೀಯ, ಕೇಂದ್ರ ಸರಕಾರ ಹಾಗೂ ರಾಜ್ಯ ಹೀಗೆ ಶಿಕ್ಷಣವನ್ನು ತುಂಡರಿಸಿ ನಮ್ಮಲ್ಲಿರುವ ರಾಷ್ಟ್ರೀಯತೆಯ ಭಾವನೆಯನ್ನು ನಾಶಗೊಳಿಸಬೇಡಿ.
ಇ. ಪ್ರತಿಯೊಬ್ಬನಿಗೂ ಮಾತೃಭಾಷೆ ಯಲ್ಲಿಯೇ ಶಿಕ್ಷಣ ಸಿಗಬೇಕು.
ಈ. ನಮಗೆ ಸೈನ್ಯ ಶಿಕ್ಷಣವನ್ನು ನೀಡಿ.
ಉ. ನಮ್ಮಲ್ಲಿ ದೇಶ ಪ್ರೇಮ ನಿರ್ಮಿಸಿ ದಂತಹ ಆದರ್ಶ ಕ್ರಾಂತಿಕಾರರ ಅಪಕೀರ್ತಿ ಆಗಲು ಬಿಡಬೇಡಿ.
ಊ. ನಮ್ಮಲ್ಲಿನ ಸಂಘಭಾವನೆ ಹೆಚ್ಚಾಗ ಲೆಂದು ಜಾತಿ, ಧರ್ಮ ಹಾಗೂ ಪಂಥ ಇವುಗಳಡಿ ನಮ್ಮನ್ನು ವಿಂಗಡಿಸಬೇಡಿ.
ಎ. ಸ್ವಾತಂತ್ರ್ಯ ದಿನವನ್ನು ತಿಥಿಗನುಸಾರವಾಗಿ ಆಚರಿಸಿ.
ಏ.ನಮಗೆ ಸಿಕ್ಕಿರುವ ಅಂಕಗಳಿಗನುಸಾರ (`ಮಾರ್ಕ್ ) ವಿದ್ಯಾಲಯದಲ್ಲಿ ಪ್ರವೇಶ ನೀಡಿ, ಮೀಸಲಾತಿ ಬೇಡ.
ಐ. ಎಲ್ಲ ಶಾಲೆಗಳಲ್ಲಿಯೂ ಸಂಪೂರ್ಣ `ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿ.
ಒ.ಎಲ್ಲ ಶಾಲೆಗಳಲ್ಲಿನ ಪ್ರಾರ್ಥನೆ ಒಂದೇ ರೀತಿಯಲ್ಲಿ ಇರಲಿ.
ಓ.ಶಾಲೆಯ ಸಮವಸ್ತ್ರ ಆಂಗ್ಲರಂತೆ,
ಉದಾ. ಟೈ, ಟೀ ಶರ್ಟ್ ಹೀಗೆ ಬೇಡ.
ವಿದ್ಯಾರ್ಥಿ ಸ್ನೇಹಿತರೇ, ಈ ಮೇಲಿನ ಎಲ್ಲ ಅಂಶಗಳನ್ನು ಆಚರಣೆಗೆ ತರುವುದ ಕ್ಕಾಗಿ ನಾವು ಈ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ
