ಉಳ್ಳಾಲ: ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ ಖುಷಿಯಲ್ಲಿ ಪಾಟರ್ಿ ಆಯೋಜಿಸಿದ್ದ ಗೆಳೆಯರ ಮಧ್ಯೆ ಉಂಟಾದ ಕ್ಷುಲಕ್ಕ ವಿಚಾರಕ್ಕೆ ಸಂಬಂಧಿಸಿ ಉಂಟಾದ ಗಲಾಟೆಯಲ್ಲಿ ಗೆಳೆಯರಲ್ಲರೂ ಸೇರಿ ಒಬ್ಬನನ್ನು ಬಲಿಪಡೆದುಕೊಂಡಿದ್ದಾರೆ. ಇಂಥದೊಂದು ವಿಲಕ್ಷಣ ಘಟನೆ ಉಳ್ಳಾಲದ ತೊಕ್ಕೊಟ್ಟು ಸಮೀಪ ರಾತ್ರಿ 11 ಗಂಟೆಯ ಸುಮಾರಿಗೆ ನಡೆದಿದೆ. ಮೃತ ಯುವಕನನ್ನು ಸೋಮೇಶ್ವರದ ರಿಕ್ಷಾ ಚಾಲಕ ಯತೀಶ್(32) ಎಂದು ಗುರುತಿಸಲಾಗಿದೆ.

ಯತೀಶ್ ತನ್ನ ಮನೆಯಲ್ಲಿ ಸ್ವಾತಂತ್ರ್ಯ ದಿನ ಅಂಗವಾಗಿ ಗೆಳೆಯರಿಗೆಲ್ಲ ಪಾಟರ್ಿ ಕೊಡಿಸಿದ್ದ. ಈ ವೇಳೆ ಫ್ರೆಂಡ್ಸ್ ಮಧ್ಯೆ ಹುಡುಗಿಯ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಪಾಟರ್ಿ ಮುಗಿದು ಗೆಳಯರೆಲ್ಲಾ ತನ್ನ ಮನೆಗೆ ಹೋಗಿದ್ದರು.
ಮಧ್ಯಾಹ್ನದ ನಡೆದ ಘಟನೆಯ ಬಗ್ಗೆ ಹಗೆ ಸಾಧಿಸಿಕೊಂಡ ಆತನ ಗೆಳೆಯರು ನಿನ್ನೆ ತಡರಾತ್ರಿ ತೊಕ್ಕೊಟ್ಟು ಸಮೀಪದ `ಮಾಯಾಬಜಾರ್’ ಎಂಬಲ್ಲಿಗೆ ಪಾಟರ್ಿ ಮಾಡಲು ತೆರಳಿದ್ದರು. ಈ ವೇಳೆ ಯತೀಶ್ ಗೆಳಯತೀಶನನ್ನು ಪಾಟರ್ಿಗೆ ಬರುವಂತೆ ಫೋನ್ನಲ್ಲಿ ಆಹ್ವಾನಿಸಿದ್ದರು. ಬಾರ್ನಲ್ಲಿ ಪಾಟರ್ಿ ಮುಗಿಸಿ, ನಶೆ ಏರಿಸಿಕೊಂಡು ಬಂದಿದ್ದ ಆತನ ಗೆಳೆಯರು, ಮಧ್ಯಾಹ್ನ ನಡೆದ ವಿಷಯಕ್ಕೆ ಸಂಬಂಧ ಪಟ್ಟಂತೆ ಜಗಳ ಆರಂಭಿಸತೊಡಗಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಆತನ ಗೆಳೆಯರೆಲ್ಲಾ ಸೇರಿ ಯತೀಶನನ್ನು ಮಚ್ಚನಿಂದ ಕೊಚ್ಚಿ ಕೊಂದಿದ್ದಾರೆ. ತಕ್ಷಣ ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಫಲಕಾರಿಯಾಗಿಲ್ಲ. ಸತೀಶ್, ವಿನಯ್, ಉದಯ್, ವಿಕ್ರಮ್ ಹಾಗೂ ಇನ್ನೊಬ್ಬ ಕೃತ್ಯದಲ್ಲಿ ಭಾಗವಹಿಸಿದ್ದಾನೆ ಎನ್ನಲಾಗಿದೆ. ಕೊಲೆ ನಡೆಸಿದವರು ಯತೀಶನಲ್ಲಿ ಒಟನಾಟ ಇಟ್ಟುಕೊಂಡಿದ್ದವರೇ ಆಗಿದ್ದರೂ, ಕುಡಿತದ ನಶೆ ತನ್ನ ಜೀವದ ಗೆಳೆಯನನ್ನೇ ಬಲಿಪಡೆದುಕೊಂಡಿದೆ. ಈ ಘಟನೆ ಬಾರ್ ಮುಂದೆ ಅಳವಡಿಸಿದ್ದ ಸಿಸಿ ಕೆಮರಾದಲ್ಲಿ ರೆಕಾಡರ್್ ಆಗಿದೆ ಎನ್ನಲಾಗಿದ್ದು, ಅದರ ಫುಟೇಜ್ ಅನ್ನು ಉಳ್ಳಾಲ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.



