666

ಬಂಟ್ವಾಳ: ಸರಣಿ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ರಸ್ತೆ ಬಳಿ ವಿದ್ಯುತ್ ತಂತಿ ದುರಸ್ತಿಪಡಿಸುತ್ತಿದ್ದ ಲೈನ್‍ಮೆನ್ ಕಾಲು ಮುರಿತಕ್ಕೊಳಗಾದ ಘಟನೆ ತಾಲೂಕಿನ ಬಿ.ಸಿ.ರೋಡ್ ಸಮೀಪದ ಕೈಕಂಬ ರಾಷ್ಟ್ರೀಯ ಹೆದ್ದಾರಿ ಬಳಿ ರವಿವಾರ ತಡವಾಗಿ ಬೆಳಕಿಗೆ ಬಂದಿದೆ.ಗಾಯಾಳನ್ನು ರಾಮನಗರ ನಿವಾಸಿ ಹನುಮೇಶ ಎಂದು ಗುರುತಿಸಲಾಗಿದೆ.

ನಗರದ ತೊಕ್ಕೊಟ್ಟು ನಿವಾಸಿ ಸವಿತಾ ಎಂಬವರು ತನ್ನ ಮಾರುತಿ ಶಿಫ್ಟ್ ಕಾರನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಒಂದು ಬೈಕ್ ಮತ್ತು ಆಕ್ಟಿವಾ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ವಿದ್ಯುತ್ ಕಂಬದ ಬಳಿ ವಿದ್ಯುತ್ ತಂತಿ ದುರಸ್ತಿಪಡಿಸುತ್ತಿದ್ದ ಲೈನ್‍ ಮೆನ್ ಕಾಲಿಗೆ ಗಾಯವಾಗಿದೆ ಎಂದು ಸಂಚಾರಿ ಠಾಣೆ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *